ನವದೆಹಲಿ: ರಾಜ್ಯ ಬಿಜೆಪಿಯಲ್ಲಿ ಮತ್ತೆ ನಾಯಕತ್ವ ಬದಲಾವಣೆ ವಿಚಾರ ಗರಿಗೆದರಿದ್ದು, ಸಿಎಂ ಬದಲಾವಣೆಗೆ ಮತ್ತೊಂದು ರೀತಿಯಲ್ಲಿ ತಂತ್ರ ಹೆಣೆಯಲಾಗುತ್ತಿದೆ ಎನ್ನಲಾಗಿದೆ. ಹಿರಿಯ ಶಾಸಕ ಅರವಿಂದ್ ಬೆಲ್ಲದ್ ದೆಹಲಿಯಲ್ಲಿ ಬೀಡು ಬಿಟ್ಟಿರುವುದು ಈ ಚರ್ಚೆಗೆ ಪುಷ್ಠಿ ನೀಡಿದೆ.
ವಾಹನ ಚಾಲನೆ ಪರವಾನಿಗೆ ನಿಯಮದಲ್ಲಿ ಮಹತ್ವದ ಬದಲಾವಣೆ: RTO ಕಛೇರಿಗೆ ಹೋಗದೆಯೂ ಪಡೆಯಬಹುದು ಡಿಎಲ್
ಇನ್ನೂ ಎರಡು ವರ್ಷ ನಾನೇ ಸಿಎಂ ಎಂದು ನಿನ್ನೆಯಷ್ಟೇ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಈಗ ಶಾಸಕ ಅರವಿಂದ್ ಬೆಲ್ಲದ್ ದೆಹಲಿಗೆ ದೌಡಾಯಿಸಿದ್ದು, ಖಾಸಗಿ ಹೋಟೆಲ್ ನಲ್ಲಿ ತಂಗಿದ್ದಾರೆ. ಬೆಲ್ಲದ್ ಈ ಹಿಂದೆ ಸಚಿವ ಸಿ.ಪಿ. ಯೋಗೇಶ್ವರ್ ಜೊತೆ ಕಾಣಿಸಿಕೊಂಡಿದ್ದರಲ್ಲದೇ ಇತ್ತೀಚಿನ ದಿನದಲ್ಲಿ ಅವರ ಎರಡನೇ ಬಾರಿಯ ದೆಹಲಿ ಪ್ರವಾಸವಾಗಿದೆ.
23 ವರ್ಷದ ಯುವಕನಿಗೆ 60 ರ ವೃದ್ದೆ ಮೇಲೆ ಪ್ರೀತಿ…! ಟ್ರೋಲಿಗರ ಪ್ರಶ್ನೆಗೆ ಜೋಡಿಯಿಂದ ಖಡಕ್ ಉತ್ತರ
ಜೂನ್ 16ರಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಈ ಹೊತ್ತಲ್ಲೇ ಬೆಲ್ಲದ್ ದೆಹಲಿಗೆ ತೆರಳಿರುವುದು ರಾಜ್ಯ ರಾಜಕೀಯದಲ್ಲಿ ಮತ್ತೆ ಕುತೂಹಲವನ್ನು ಇಮ್ಮಡಿಗೊಳಿಸಿದೆ.