ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 19 ಜಿಲ್ಲೆಗಳಲ್ಲಿ ಇಂದಿನಿಂದ ಲಾಕ್ ಡೌನ್ ಸಡಿಲಿಸಲಾಗಿದ್ದು, ಅನ್ ಲಾಕ್ ಆರಂಭವಾಗುತ್ತಿದ್ದಂತೆಯೇ ಜನರು ಕೊರೊನಾ ಮರೆತು ಓಡಾಟ ನಡೆಸಿದ್ದು, ವಾಹನ ಸಂಚಾರಕ್ಕೂ ಕಡಿವಾಣವಿಲ್ಲದಂತಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಮತ್ತೆ ಕೊರೊನಾರ್ಭಟ ಹೆಚ್ಚುವ ಭೀತಿ ಎದುರಾಗಿದೆ.
ಸೋಂಕಿತರ ಸಂಖ್ಯೆ ಹೆಚ್ಚಿರುವ 11 ಜಿಲ್ಲೆಗಳಲ್ಲಿ ಇಂದಿನಿಂದ ಒಂದು ವಾರ ಲಾಕ್ ಡೌನ್ ವಿಸ್ತರಣೆಯಾಗುತ್ತಿದ್ದು, ಆದರೆ ಉಳಿದ 19 ಜಿಲ್ಲೆಗಳಲ್ಲಿ ಅನ್ ಲಾಕ್ ಆರಂಭವಾಗಿದೆ. ಜಿಲ್ಲೆಗಳಲ್ಲಿ ಜನ ಸಂಚಾರಕ್ಕೆ, ಅಗತ್ಯ ವಸ್ತುಗಳ ಖರೀದಿಗೆ ನಿಗದಿಯಾಗಿದ್ದ ಸಮಯವನ್ನು ಕೂಡ ಮಧ್ಯಾಹ್ನ 2 ಗಂಟೆವರೆಗೆ ವಿಸ್ತರಿಸಿರುವುದರಿಂದ ಜನರು ದೈಹಿಕ, ಸಾಮಾಜಿಕ ಅಂತರ ಮರೆತು ರಾಜಾರೋಷವಾಗಿ ಓಡಾಟ ನಡೆಸಿದ್ದಾರೆ.
ನಟ ಸಂಚಾರಿ ವಿಜಯ್ ಗೆ ಬ್ರೇನ್ ಸ್ಟ್ರೋಕ್; ಆರೋಗ್ಯ ಸ್ಥಿತಿ ಇನ್ನಷ್ಟು ಚಿಂತಾಜನಕ
ಲಾಕ್ ಡೌನ್ ತೆರವಾಗುತ್ತಿರುವ ಬೆನ್ನಲ್ಲೇ ಊರುಗಳಿಗೆ ತೆರಳಿದ್ದ ಜನರು ಕುಟುಂಬ ಸಮೇತರಾಗಿ ಮತ್ತೆ ನಗರ ಪ್ರದೇಶಕ್ಕೆ, ಬೆಂಗಳೂರು ನಗರಕ್ಕೆ ವಾಪಸ್ ಆಗುತ್ತಿದ್ದಾರೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಂತೂ ಜನ ಸಂಚಾರಕ್ಕೆ ಬ್ರೇಕ್ ಹಾಕುವವರೇ ಇಲ್ಲ ಎಂಬಂತಾಗಿದೆ. ರಸ್ತೆ ರಸ್ತೆಗಳಲ್ಲೂ ವಾಹನ ದಟ್ಟಣೆಯಿಂದಾಗಿ ಟ್ರಾಫಿಕ್ ಜಾಮ್ ಸಂಭವಿಸಿದ್ದು, ಮಾರುಕಟ್ಟೆಗಳು, ಅಂಗಡಿ ಮುಂಗಟ್ಟುಗಳಲ್ಲಿ ಜನಜಾತ್ರೆಯೇ ಏರ್ಪಟ್ಟಿದೆ.
ಅಳಿಲು ಎಂದುಕೊಂಡು ಹತ್ತಿರಹೋದ ಬಾಲೆ ಕಣ್ಣಿಗೆ ಕಂಡದ್ದು ಜೀವಂತ ಬಾಂಬ್
ಅನ್ ಲಾಕ್ ಮಾಡಿದರೂ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿ, ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಕಠಿಣ ನಿಯಮ ಜಾರಿಗೆ ತರುವಂತೆ ಜೂನ್ 11ರಂದು ನಡೆದಿದ್ದ ಸಭೆಯಲ್ಲಿ ಸರ್ಕಾರಕ್ಕೆ, ತಾಂತ್ರಿಕ ಸಲಹಾ ಸಮಿತಿ ಸೂಚನೆ ನೀಡಿತ್ತು. ಆದರೆ ರಾಜ್ಯ ಸರ್ಕಾರ ಸಮಿತಿ ನೀಡಿದ್ದ ಸಲಹೆ ಗಾಳಿಗೆ ತೂರಿ ಜಿಲ್ಲೆಗಳಲ್ಲಿ ಸಂಚಾರಕ್ಕೆ ಅನುಮತಿ ನೀಡಿದೆ. ಇದರಿಂದಾಗಿ ರಾಜ್ಯದಲ್ಲಿ ಮತ್ತೆ ಕೊರೊನಾ ಅಟ್ಟಹಾಸ ಹೆಚ್ಚುವ ಸಾಧ್ಯತೆ ದಟ್ಟವಾಗಿದೆ.