ಮೈಸೂರು: ನಾನು ರಾಜೀನಾಮೆ ಬಗ್ಗೆ ತೀರ್ಮಾನಿಸಲೆಂದು ಮಠಕ್ಕೆ ಬಂದಿಲ್ಲ. ಬಿಜೆಪಿ ಸರ್ಕಾರವನ್ನು ತಂದವನೇ ನಾನು. ಮಂತ್ರಿಸ್ಥಾನ ಕೇಳುತ್ತೀನಾ ? ಎಂದು ಹೇಳುವ ಮೂಲಕ ರಮೇಶ್ ಜಾರಕಿಹೊಳಿ ನಡೆ ಇನ್ನಷ್ಟು ಕುತೂಹಲ ಮೂಡಿಸಿದೆ.
BREAKING NOW: ಮಾಜಿ ಕಾರ್ಪೊರೇಟರ್ ಹತ್ಯೆ ಪ್ರಕರಣ; ಆರೋಪಿಗಳ ಮೇಲೆ ಪೊಲೀಸ್ ಫೈರಿಂಗ್
ರಾಜ್ಯ ರಾಜಕೀಯದಲ್ಲಿ ಮತ್ತೆ ಸಂಚಲನ ಮೂಡಿಸಲು ಸಿದ್ಧತೆ ನಡೆಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇದೀಗ ಸುತ್ತೂರು ಮಠಕ್ಕೆ ಭೇಟಿ ನೀಡಿ ಡಾ. ಶಿವರಾತ್ರಿ ದೇಶಿಕೇಂದ್ರ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಮಾತನಾಡಿದ ಜಾರಕಿಹೊಳಿ, ರಾಜಕೀಯ ನಿರ್ಧಾರಕ್ಕಾಗಿ ಮಠಕ್ಕೆ ಭೇಟಿ ಕೊಟ್ಟಿಲ್ಲ. ಸುತ್ತೂರು ಶ್ರೀ ತಾಯಿ ಸಾವು ಹಿನ್ನೆಲೆಯಲ್ಲಿ ಮಠಕ್ಕೆ ಭೇಟಿ ನೀಡಿದ್ದೇನೆ ಎಂದರು.
ಬೈಕರ್ ಗೆ ಏಕಾಏಕಿ ಎದುರಾದ್ವು 3 ಕರಡಿ: ವಿಡಿಯೋ ವೈರಲ್
ಸರ್ಕಾರ ತಂದವನೇ ನಾನು. ಇನ್ನು ಮಂತ್ರಿ ಸ್ಥಾನವನ್ನು ಮತ್ತೆ ಕೇಳುತ್ತೇನಾ? ಶಾಸಕ ಸ್ಥಾನಕ್ಕೆ ಈಗ ರಾಜೀನಾಮೆ ಕೊಡುವುದಿಲ್ಲ. ರಾಜೀನಾಮೆ ಬಗ್ಗೆ ಮುಂಬೈಗೆ ಹೋಗಿ ತೀರ್ಮಾನ ಮಾಡುತ್ತೇನೆ ಎಂದು ತಿಳಿಸಿದರು. ಒಟ್ಟಾರೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಡೆ ಇನ್ನಷ್ಟು ನಿಗೂಢವಾಗಿದೆ.