ಮೈಸೂರು: ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮೈಸೂರಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡ ಬಳಿಕ ರಾಜವಂಶಸ್ಥರ ಜತೆ ಉಪಹಾರ ಸೇವಿಸಿದ್ದಾರೆ.
ಅರಮನೆ ಮೈದಾನದಲ್ಲಿ ನಡೆದ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸ್ವತ: ಯೋಗಾಸನಗಳನ್ನು ಮಾಡುವ ಮೂಲಕ ವಿಶ್ವಕ್ಕೆ ಯೋಗದ ಮಹತ್ವ ಸಾರಿದ ಪ್ರಧಾನಿ ಮೋದಿಯವರನ್ನು ರಾಜವಂಶಸ್ಥೆ ಪ್ರಮೋದಾ ದೇವಿ ಉಪಹಾರಕ್ಕೆ ಆಹ್ವಾನಿಸಿದ್ದರು.
ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮೈಸೂರು ಅರಮೆನೆಗೆ ತೆರಳಿ ರಾಜವಂಶಸ್ಥರೊಂದಿಗೆ ಉಪಹಾರ ಸೇವಿಸಿದ್ದಾರೆ. ಬೆಳ್ಳಿ ತಟ್ಟೆಯಲ್ಲಿ ಅವಲಕ್ಕಿ, ಉಪ್ಪಿಟ್ಟು, ಇಡ್ಲಿ ಸಾಂಬಾರ್, ಮೈಸೂರು ಪಾಕ್ ಸೇರಿದಂತೆ ಬಗೆ ಬಗೆಯ ಉಪಹಾರ, ಸಿಹಿ ತಿಂಡಿಗಳನ್ನು ಪ್ರಧಾನಿಗಾಗಿ ಸಿದ್ಧಪಡಿಸಲಾಗಿದ್ದು, ಉಪಹಾರ, ಸಿಹಿ ತಿಂಡಿಗಳನ್ನು ಪ್ರಧಾನಿ ಸವಿದಿದ್ದಾರೆ.