alex Certify BIG NEWS: ರಮೇಶ್ ಜಾರಕಿಹೊಳಿ ಸಿಡಿ ಕೇಸ್; ಎಸ್ಐಟಿ ತನಿಖೆ ಮುಗಿಯುತ್ತಿದ್ದಂತೆ ಸ್ಫೋಟಕ ಟ್ವಿಸ್ಟ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಮೇಶ್ ಜಾರಕಿಹೊಳಿ ಸಿಡಿ ಕೇಸ್; ಎಸ್ಐಟಿ ತನಿಖೆ ಮುಗಿಯುತ್ತಿದ್ದಂತೆ ಸ್ಫೋಟಕ ಟ್ವಿಸ್ಟ್…!

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಕೇಸ್ ಗೆ ಸಂಬಂಧಿಸಿದಂತೆ ತನಿಖೆ ಅಂತಿಮ ಹಂತ ತಲುಪಿದ್ದು, ಇದೀಗ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಯುವತಿ ಹಾಗೂ ಕಿಂಗ್ ಪಿನ್ ಗಳ ಮೊಬೈಲ್ ನಲ್ಲಿ ಡಿಲಿಟ್ ಮಾಡಲಾಗಿದ್ದ ಹಲವು ಮಾಹಿತಿಗಳು ಪೊಲಿಸರಿಗೆ ಲಭ್ಯವಾಗಿದೆ.

ಯುವತಿ ವಿರುದ್ಧ ರಮೇಶ್ ನೀಡಿದ್ದ ಬ್ಲ್ಯಾಕ್ ಮೇಲ್ ಪ್ರಕರಣ ಹಾಗೂ ರಮೆಶ್ ಜಾರಕಿಹೊಳಿ ವಿರುದ್ಧ ಯುವತಿ ನೀಡಿದ್ದ ಕೆಲಸದ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ನಡೆಸುತ್ತಿದ್ದು, ಇದೀಗ ಮಹತ್ವದ ಸಾಕ್ಷ್ಯ ಲಭ್ಯವಾಗಿದೆ. ಯುವತಿ ಹಾಗೂ ಶರಣ್, ನರೇಶ್ ಮೊಬೈಲ್ ಡೇಟಾ ರಿಟ್ರೀವ್ ಮಾಡಲಾಗಿದ್ದು, ಆರೋಪಿಗಳು ಹಾಗೂ ಇನ್ನೂ ಹಲವರ ಜೊತೆ ಯುವತಿ ನಡೆಸಿರುವ ಸಂಭಾಷಣೆ, ಮೂವರ ಮೊಬೈಲ್ ನಲ್ಲಿ ಡಿಲಿಟ್ ಮಾಡಲಾಗಿದ್ದ ಹಲವು ಡೇಟಾ, ಸಿಡಿ ರೇಕಾರ್ಡ್ ಮಾಡಿ ಬಿಡುಗಡೆಗೆ ನಡೆಸಿದ್ದ ಪಿತೂರಿ ಸೇರಿದಂತೆ ಹಲವು ಮಹತ್ವದ ಮಾಹಿತಿ ಬಯಲಾಗಿದೆ.

6 ತಿಂಗಳ ಮಗುವಿನ ಸಮ್ಮುಖದಲ್ಲೇ ಮದುವೆ: ಇದರ ಹಿಂದಿದೆ ಕರುಣಾಜನಕ ಕತೆ

ಅಲ್ಲದೇ ಆರೋಪಿಗಳು ಒಟ್ಟಿಗೆ ತಿರುಗಾಡಿರುವ ಬಗ್ಗೆ ಎಸ್ಐಟಿಗೆ ಹಲವು ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ. ಇದೀಗ ಎಲ್ಲಾ ಸಾಕ್ಷ್ಯಗಳನ್ನು ಎಫ್ ಎಸ್ ಎಲ್ ಗೆ ರವಾನಿಸಲಾಗಿದ್ದು, ರಿಪೋರ್ಟ್ ಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...