ಬೆಂಗಳೂರು: ಯುವತಿ ಮೇಲೆ ಆಸಿಡ್ ದಾಳಿ ನಡೆಸಿ ಪರಾರಿಯಾಗಿರುವ ಆರೋಪಿ ನಾಗೇಶ್ ಸುಳಿವು ಇನ್ನೂ ಸಿಕ್ಕಿಲ್ಲ. ಈ ನಡುವೆ ಆತ ಬಳಸುತ್ತಿದ್ದ ಹಳೇ ಮೊಬೈಲ್ ಹೊಸಕೋಟೆ ಬಳಿ ಪತ್ತೆಯಾಗಿದೆ.
ಆರೋಪಿ ನಾಗೇಶ್ ಮಾಗಡಿ ರಸ್ತೆಯ ಬ್ಯಾಡರಹಳ್ಳಿಯಲ್ಲಿ ಹೊಸ ಸಿಮ್ ಖರೀದಿಸಿದ್ದು, ಆತನ ಕಾಲ್ ಡೀಟೈಲ್ಸ್ ನೋಡಿದಾಗ ಹೊಸ ಸಿಮ್ ಖರೀದಿಸಿದ್ದು ಪತ್ತೆಯಾಗಿದೆ. ಹಳೆ ಮೊಬೈಲ್ ನ್ನು ಹೊಸಕೋಟೆ ಬಳಿ ಎಸೆದು ಪರಾರಿಯಾಗಿದ್ದಾನೆ. ಅಲ್ಲದೇ ಹೊಸ ಸಿಮ್ ನ್ನು ಆಕ್ಟೀವೇಷನ್ ಮಾಡಿಕೊಂಡಿಲ್ಲ ಎಂದು ತಿಳಿದುಬಂದಿದೆ.
ಬಾಡಿಗೆಗಿರುವ ಈ ಮನೆ ಬೆಡ್ರೂಮ್ ಕಥೆಯನ್ನು ಕೇಳಲೇಬೇಡಿ…!
ಈ ಬೆಳವಣಿಗೆ ಪ್ರಕಾರ ಆರೋಪಿ ನಾಗೇಶ್ ಯುವತಿ ಮೇಲೆ ಆಸಿಡ್ ದಾಳಿ ನಡೆಸಲು ಮೊದಲೇ ಪ್ಲಾನ್ ಮಾಡಿಕೊಂಡಿದ್ದ ಎಂಬುದು ಖಚಿತವಾಗಿದೆ.
ಆಸಿಡ್ ದಾಳಿಗೆ ಒಳಗಾಗಿದ್ದ ಯುವತಿಗೆ ನಿನ್ನೆಯಿಂದ ಸ್ಕಿನ್ ಜೋಡಣೆ ಮಾಡಲಾಗುತ್ತಿದ್ದು, ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.