ಬೆಂಗಳೂರು: ನಾನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿಲ್ಲ, ಅವರ ಹುಟ್ಟುಹಬ್ಬ ಹೊರತುಪಡಿಸಿ ಬೇರೆ ಕಾರಣಕ್ಕೆ ಭೇಟಿಯಾಗಿಲ್ಲ ಕುಮಾರಸ್ವಾಮಿ ಆರೋಪ ಶುದ್ಧ ಸುಳ್ಳು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ದುರ್ಗಾ ಪೂಜಾ ಪೆಂಡಾಲ್ ನಲ್ಲಿ ಹಿಂದೂಗಳನ್ನು ಹೊರತುಪಡಿಸಿ ಅನ್ಯ ಧರ್ಮೀಯರಿಗಿಲ್ಲ ಪ್ರವೇಶ
ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಯಡಿಯೂರಪ್ಪ ಅವರನ್ನು ಹುಟ್ಟುಹಬ್ಬದ ದಿನ ಭೇಟಿ ಮಾಡಿದ್ದೆ. ಅದನ್ನು ಹೊರತುಪಡಿಸಿ ನಾನು ಯಡಿಯೂರಪ್ಪ ಅವರನ್ನು ಭೇಟಿ ಮಾಡಿಲ್ಲ. ನಾನು ಭೇಟಿ ಮಾಡಿದ್ದೇನೆ ಎಂಬುದನ್ನು ಸಾಬೀತು ಪಡಿಸಿದರೆ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಶಾರುಖ್ ಮೇಲೆ ಬರೆದ ಪದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ರಾಜಕೀಯದಲ್ಲಿ ರೀತಿ-ನೀತಿ, ನಿಯಮಗಳಿವೆ. ನಾನು ಅಧಿಕಾರದಲ್ಲಿರುವವರನ್ನು ಯಾವತ್ತೂ ವೈಯಕ್ತಿಕವಾಗಿ ಭೇಟಿಯಾಗಲ್ಲ. ಹಾಗೆ ಭೇಟಿ ಮಾಡುವವರು ಕುಮಾರಸ್ವಾಮಿ. ನಾನು ಬಿ ಎಸ್ ವೈ ಭೇಟಿಯಾಗಿದ್ದೇನೆ ಎಂಬುದನ್ನು ಕುಮಾರಸ್ವಾಮಿ ಪ್ರೂವ್ ಮಾಡಲಿ. ಪ್ರೂವ್ ಮಾಡಿದರೆ ನಾನು ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಎಂದರು.
ಸಿನಿಮೀಯ ರೀತಿಯಲ್ಲಿ ಬರೋಬ್ಬರಿ 72 ಲಕ್ಷ ರೂಪಾಯಿ ವಂಚನೆ
ಕುಮಾರಸ್ವಾಮಿ ಆರೋಪ ಸಿದ್ದರಾಮಯ್ಯ ಅವರ ಹೇಳಿಕೆಗಳ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ನನ್ನ ಜನ್ಮದಿನದಂದು ಮಾತ್ರ ಸಿದ್ದರಾಮಯ್ಯ ನನ್ನನ್ನು ಭೇಟಿ ಮಾಡಿದ್ದರು. ಆನಂತರ ಅವರು ಭೇಟಿ ಮಾಡಿಲ್ಲ. ಅದರ ಅಗತ್ಯವೂ ಇಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಯಡಿಯೂರಪ್ಪ, ಫೆ.27, 2020 ರಂದು ನಡೆದ ನನ್ನ ಹುಟ್ಟುಹಬ್ಬದ ಕಾರ್ಯಕ್ರಮ ಹೊರತುಪಡಿಸಿ ಸಿದ್ದರಾಮಯ್ಯ ಅವರನ್ನು ನಾನು ವೈಯಕ್ತಿಕವಾಗಿ ಭೇಟಿಯಾಗಿಲ್ಲ. ಅದರ ಅಗತ್ಯವೂ ಇಲ್ಲ ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವುದೇ ನನ್ನ ಗುರಿ. ಗುರಿ ತಲುಪುವವರೆಗೂ ವಿಶ್ರಮಿಸುವುದಿಲ್ಲ, ನಂಬಿದ ಸಿದ್ಧಾಂತಗಳೊಂದಿಗೆ ನಾನೆಂದೂ ರಾಜಿಯಾಗಲ್ಲ, ಆಗುವುದೂ ಇಲ್ಲ. ಮಾಧ್ಯಮಗಳಲ್ಲಿನ ಸುದ್ದಿ, ಚರ್ಚೆ ಅರ್ಥಹೀನವಾದದ್ದು ಎಂದು ತಿಳಿಸಿದ್ದಾರೆ.