alex Certify BIG NEWS: ಮೊಟ್ಟ ಮೊದಲ ಬಾರಿಗೆ ದೈನಂದಿನ ಬಳಕೆದಾರರ ಸಂಖ್ಯೆಯಲ್ಲಿ ಕುಸಿತ ಕಂಡ ಫೇಸ್​ಬುಕ್​​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮೊಟ್ಟ ಮೊದಲ ಬಾರಿಗೆ ದೈನಂದಿನ ಬಳಕೆದಾರರ ಸಂಖ್ಯೆಯಲ್ಲಿ ಕುಸಿತ ಕಂಡ ಫೇಸ್​ಬುಕ್​​..!

ಮೆಟಾ ಮಾಲೀಕತ್ವದ ಫೇಸ್​ಬುಕ್​ ಆರಂಭದ ದಿನಗಳಿಂದಲೂ ತನ್ನ ಬಳಕೆದಾರರನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿದೆ. ಆದರೆ ಬುಧವಾರದಂದು ಆಶ್ಚರ್ಯಕರ ಎಂಬಂತೆ ಮೊದಲ ತ್ರೈಮಾಸಿಕದ ಅವಧಿಯಲ್ಲಿ ಜಾಗತಿಕವಾಗಿ ದೈನಂದಿನ ಬಳಕೆದಾರರಲ್ಲಿ ಫೇಸ್​ಬುಕ್​ ಕುಸಿತವನ್ನು ಕಂಡಿದೆ. ಅಲ್ಲದೇ ನಿರೀಕ್ಷೆಗಿಂತ ಕಡಿಮೆ ಜಾಹೀರಾತುಗಳ ಬೆಳವಣಿಗೆಯೊಂದಿಗೆ ತನ್ನ ಷೇರುಗಳಲ್ಲಿ ಇಪ್ಪತ್ತು ಪ್ರತಿಶತದಷ್ಟು ಕುಸಿತವನ್ನು ಕಂಡಿದೆ.

ಹಿಂದಿನ ತ್ರೈಮಾಸಿಕದಲ್ಲಿ 1.93 ಶತಕೋಟಿಯಿಂದ 1.929 ಮಿಲಿಯನ್​​ ಬಳಕೆದಾರರಿಗೆ ಫೇಸ್​ಬುಕ್​ ಇಳಿಮುಖವನ್ನು ಕಂಡಿದೆ. ಈ ಮೂಲಕ ಯುವಜನತೆ ಫೇಸ್​ಬುಕ್​ನತ್ತ ಮುಖ ಮಾಡುವುದನ್ನು ಕಡಿಮೆ ಮಾಡಿದ್ದಾರೆ ಎಂಬ ಅನುಮಾನ ಕಾಡಲು ಆರಂಭವಾಗಿದೆ.

ಟಿಕ್​ಟಾಕ್​​ನಂತಹ ಪ್ರತಿಸ್ಪರ್ಧಿಗಳು ಹಾಗೂ ಆ್ಯಪಲ್​ ಕಂಪನಿಗಳಲ್ಲಿ ಹೆಚ್ಚಿನ ಭದ್ರತಾ ನಿಯಮಗಳ ಕಾರಣದಿಂದಾಗಿ ಪ್ರಸಕ್ತ ತ್ರೈಮಾಸಿಕದಲ್ಲಿ ಆದಾಯವು ನಿರೀಕ್ಷೆಗಿಂತ ಕಡಿಮೆ ಬರುವ ಸಾಧ್ಯತೆ ಇದೆ ಎಂದು ಕಂಪನಿ ಹೇಳಿತ್ತು.

ಮೆಟಾದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೆರಿಲ್​ ಸ್ಯಾಂಡ್​ಬರ್ಗ್​, ಸಿಬ್ಬಂದಿ ಕೊರತೆ, ಜಾಗತಿಕ ಪೂರೈಕೆಯ ಸರಪಳಿ ಸಮಸ್ಯೆ, ಜಾಹೀರಾತುದಾರರ ಸಮಸ್ಯೆಯಿಂದಾಗಿ ಕಂಪನಿಯ ಮೇಲೆ ಒತ್ತಡ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...