alex Certify BIG NEWS: ಮೈಸೂರು ದಸರಾ ಮಹೋತ್ಸವ; ಕಣ್ಮನ ಸೆಳೆದ ಸ್ತಬ್ಧಚಿತ್ರಗಳು, ಕಲಾತಂಡಗಳ ಮೆರವಣಿಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮೈಸೂರು ದಸರಾ ಮಹೋತ್ಸವ; ಕಣ್ಮನ ಸೆಳೆದ ಸ್ತಬ್ಧಚಿತ್ರಗಳು, ಕಲಾತಂಡಗಳ ಮೆರವಣಿಗೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಐತಿಹಾಸಿಕ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಸ್ತಬದ್ಧಚಿತ್ರಗಳ ಮೆರೆವಣಿಗೆ, ಕಲಾತಂಡಗಳ ವೈಭವ ಆರಂಭವಾಗಿದೆ.

ಜಂಬೂ ಸವಾರಿ ಮೆರವಣಿಗೆಯಲ್ಲಿ 31 ಜಿಲ್ಲೆಗಳ 47 ಸ್ಥಬ್ಧಚಿತ್ರಗಳು ಸಾಗಿದ್ದು, ವಿಶೇಷವಾಗಿ ದಿ.ಪವಸ್ಟಾರ್ ಪುನೀತ್ ರಾಜ್ ಕುಮಾರ್ ಭಾವಚಿತ್ರವಿರುವ ಸ್ತಬ್ಧಚಿತ್ರ ಪ್ರದರ್ಶನವಾಗಿದೆ. ಜಂಬೂ ಸವಾರಿ ಮೆರವಣಿಗೆ ನೋಡಲು ಲಕ್ಷಾಂತರ ಜನರು ಅರಮನೆಯತ್ತ ಆಗಮಿಸಿದ್ದು, ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಭಾವಚಿತ್ರದೊಂದಿದೆ ಬಂದಿರುವುದು ಗಮನ ಸೆಳೆಯಿತು.

ಮೆರವಣಿಗೆಯಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ಶ್ವಾನ, ಇಳಕಲ್ ಸೀರೆ, ದುರ್ಗಾಂಬ ದೇವಸ್ಥಾನ, ಬಳ್ಳಾರಿ ಜಿಲ್ಲೆಯ ದುರ್ಗಾಂಬ ದೇವಸ್ಥಾನ, ಮಿಂಜೇರಿ ಗುಡ್ಡ, ಬಳ್ಳಾರಿ ಕೋಟೆ, ಬೆಳಗಾವಿ ಜಿಲ್ಲೆಯ ಶ್ರೀ ರೇಣುಕಾದೇವಿ ದೇವಸ್ಥಾನ, ಕಮಲ ಬಸಿದಿ, ಬೆಂಗಳೂರು ಗ್ರಾಮಾಂತರದ ಮನ್ಯಾಪುರ ದೇವಸ್ಥಾನ, ಕಪಿಲೇಶ್ವರ ದೇವಸ್ಥಾನ, ಜೈನಬಸಿದಿ, ಸಿಂಪಾಡಿಪುರ ವೀಣೆ, ಬೆಂಗಳೂರು ನಗರ ಜಿಲ್ಲೆಯ ಕಡಲೆಕಾಯಿ ಪರಿಷೆ, ಬಸವನಗುಡಿ, ಬೀದರ್ ನ ನೂತನ ಅನುಭವ ಮಂತಪ, ಚಾಮರಾಜನಗರದ ವನ್ಯಧಾಮ, ಶ್ರೀಮಹದೇಶ್ವರ ವಿಗ್ರಹ, ಪುನೀತ್ ರಾಜ್ ಕುಮಾರ್ ಪ್ರತಿಮೆ, ಚಿಕ್ಕಬಳ್ಳಾಪುರದ ಗ್ರೀನ್ ನಂದಿ, ಕ್ಲೀನ್ ನಂದಿ, ಭೋಗೇಶ್ವರ ದೇವಸ್ಥಾನ, ಚಿಕ್ಕಮಗಳೂರು-ದ್ವಾದಶ ಜಿಲ್ಲೆಗಳಿಗೆ ಜೀವನಾಡಿ ಚಿಕ್ಕಮಗಳೂರು ಜಿಲ್ಲೆಯು ಸ್ತಪ್ತನದಿಗಳ ತವರು, ಮೈಸೂರು – ಮೈಸೂರು ಜಿಲ್ಲೆ ವಿಶೇಷತೆಗಳು, ಉತರ ಕನ್ನಡ- ಕಾರವಾರ ನೌಕಾನೆಲೆ, ಶಿವಮೊಗ್ಗ – ಅಕ್ಕಮಹಾದೇವಿ ಜನ್ಮಸ್ಥಳ, ಉಡುತಡಿ, ಶಿಕಾರಿಪುರ ಸೇರಿದಂತೆ ವಿವಿಧ ಜಿಲ್ಲೆಗಳ ಸ್ತಬ್ಧಚಿತ್ರಗಳು ಕಣ್ಮನ ಸೆಳೆದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...