alex Certify BIG NEWS: ಮೈಸೂರು ಗ್ಯಾಂಗ್ ರೇಪ್ ಪ್ರಕರಣ; ಆರೋಪಿಗಳ ಒಂದೊಂದೇ ಕ್ರಿಮಿನಲ್ ಹಿನ್ನೆಲೆ ಬಯಲು; ಬಿಡುಗಡೆಯಾಗುತ್ತಿದ್ದಂತೆ ನೀಚ ಕೃತ್ಯವೆಸಗಿದ ಕೀಚಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮೈಸೂರು ಗ್ಯಾಂಗ್ ರೇಪ್ ಪ್ರಕರಣ; ಆರೋಪಿಗಳ ಒಂದೊಂದೇ ಕ್ರಿಮಿನಲ್ ಹಿನ್ನೆಲೆ ಬಯಲು; ಬಿಡುಗಡೆಯಾಗುತ್ತಿದ್ದಂತೆ ನೀಚ ಕೃತ್ಯವೆಸಗಿದ ಕೀಚಕರು

ಮೈಸೂರು: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ನಡೆಸಿದ್ದು, ಆರಲ್ಲ, 7 ಕಾಮುಕರು ಎಂಬ ಆಘಾತಕಾರಿ ಅಂಶ ಬಯಲಾಗಿದೆ. ಆರೋಪಿಗಳ ವಿಚಾರಣೆ ವೇಳೆ ಒಂದೊಂದೇ ಮಾಹಿತಿ ಬೆಳಕಿಗೆ ಬರುತ್ತಿದೆ.

ಈವರೆಗೆ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಈ ನಡುವೆ 10 ದಿನಗಳ ಕಾಲ ಪೊಲೀಸ್ ಕಷ್ಟಡಿಗೆ ಪಡೆದುಕೊಂಡಿರುವ ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಲಾಗಿದ್ದು, ಓರ್ವ ಆರೋಪಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದರೆ, ಇನ್ನೋರ್ವ ಆರೋಪಿ ಶ್ರೀಗಂಧದ ಮರ, ಕಾರು ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ.

ಸಲ್ಮಾನ್ ಫ್ಯಾನ್ಸ್ ಗಳಿಗಾಗಿ ಪ್ಲೇ ಸ್ಟೋರ್‌ ನಲ್ಲಿ ‘ಸೆಲ್ಮೊನ್ ಭಾಯಿ’ ಗೇಮ್ ಲಭ್ಯ

5 ಲಕ್ಷ ಮೌಲ್ಯದ ಶ್ರೀಗಂಧ, ಕಾರುಗಳನ್ನು ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಮೈಸೂರು ನಜರ್ ಬಾದ್ ಠಾಣೆ ಪೊಲೀಸರು ಬಂಧಿಸಿ, ಜೈಲಿಗೆ ಕಳುಹಿಸಿದ್ದರು. 6 ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದ ಆರೋಪಿ ಮತ್ತೆ ಅಪರಾಧ ಕೃತ್ಯಗಳನ್ನು ಮುಂದುವರೆಸಿದ್ದ. 6 ಸ್ನೇಹಿತರೊಂದಿಗೆ ಸೇರಿ ಗ್ಯಾಂಗ್ ರೇಪ್ ಕೃತ್ಯ ನಡೆಸಿದ್ದಾನೆ. ಆರೋಪಿ ಒಟ್ಟು 10 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಎಂದು ತಿಳಿದುಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...