alex Certify BIG NEWS: ಮುರುಘಾ ಮಠದ ಪವರ್ ಆಫ್ ಅಟಾರ್ನಿ ಹಸ್ತಾಂತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮುರುಘಾ ಮಠದ ಪವರ್ ಆಫ್ ಅಟಾರ್ನಿ ಹಸ್ತಾಂತರ

ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುರುಘಾಶ್ರೀಗಳು ಪೀಠ ತ್ಯಾಗಕ್ಕೆ ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ ನಿವೃತ್ತ ನ್ಯಾಯಮೂರ್ತಿಗಳಿಗೆ ಮಠದ ಪವರ್ ಆಫ್ ಅಟಾರ್ನಿ ಹಸ್ತಾಂತರಿಸಿದ್ದಾರೆ.

ನಿವೃತ್ತ ನ್ಯಾ.ಎಸ್.ಬಿ. ವಸ್ತ್ರದಮಠ್ ಅವರಿಗೆ ಮುರುಘಾ ಶ್ರೀಗಳು ಪವರ್ ಆಫ್ ಅಟಾರ್ನಿ ನೀಡಿದ್ದಾರೆ. ಅಧಿಕೃತವಾಗಿ ನೋಟರಿ ಮಾಡಿ ಮಠದ ಆಸ್ತಿ ಪತ್ರಗಳನ್ನು ನೀಡಲಾಗಿದೆ.

ವಿವಿಧ ಆಡಳಿತಾತ್ಮಕ ನಿರ್ಧಾರಕ್ಕಾಗಿ ಮುರುಘಾ ಮಠದ ಪವರ್ ಆಫ್ ಅಟಾರ್ನಿಯನ್ನು ನೀಡಲು ಹೈಕೋರ್ಟ್ ಅವಕಾಶ ಕಲ್ಪಿಸಿತ್ತು. ಈ ಹಿನ್ನೆಲೆಯಲ್ಲಿ ಮುರುಘಾ ಶ್ರೀಗಳು ಪವರ್ ಆಫ್ ಅಟಾರ್ನಿ ಯನ್ನು ವಸ್ತ್ರದಮಠ್ ಅವರಿಗೆ ನೀಡಿದ್ದಾರೆ. ವಸ್ತ್ರದಮಠ್ ನಿವೃತ್ತ ನ್ಯಾಯಮೂರ್ತಿ ಹಾಗೂ ಎಸ್ ಜೆ ಎಂ ವಿದ್ಯಾಪೀಠದ ಕಾರ್ಯದರ್ಶಿಗಳೂ ಆಗಿದ್ದಾರೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...