ಮಂಡ್ಯ: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪುತ್ರಿ ನಿಶಾಗೆ ಸಂಕಷ್ಟ ಎದುರಾಗಿದೆ. ಗೋದಾಮಿಗೆ ಬಾಡಿಗೆ, ಕಂದಾಯ ಹಣ ಪಾವತಿಸದ ಹಿನ್ನೆಲೆಯಲ್ಲಿ ನಿಶಾ ವಿರುದ್ಧ ಕಾನೂನು ಹೋರಾಟಕ್ಕೆ ಟಿಎಪಿಸಿಎಂಎಸ್ ನಿರ್ಧರಿಸಿದೆ.
ನಿಶಾ ಯೋಗೇಶ್ವರ್ ಡೆಕ್ಕನ್ ಫೀಲ್ಡ್ ಆಗ್ರೋ ಇಂಡಸ್ಟ್ರೀಸ್ ಮಾಲಕಿ. ಕಂಪನಿ 2017ರಲ್ಲಿ ಗೋದಾಮು ಬಾಡಿಗೆಗೆ ನೀಡಿತ್ತು. ಮಂಡ್ಯ ಜಿಲ್ಲೆ ಮದ್ದೂರಿನ ಟಿಎಪಿಸಿಎಂಎಸ್ ಗೆ ಸೇರಿದ ಗೋದಾಮು ಬಾಡಿಗೆ ಪಡೆದುಕೊಂಡಿದ್ದರು. ಆದರೆ ಒಪ್ಪಂದದಂತೆ ನಿಶಾ ಬಾಡಿಗೆ ಹಣ ಹಾಗೂ ಕಂದಾಯಯವನ್ನು ಪಾವತಿ ಮಾಡಿಲ್ಲ. ಹಲವು ಬಾರಿ ಸೂಚಿಸಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಸಾವಿರಾರು ಫೋನ್ ಕರೆ ಸ್ವೀಕರಿಸಿದ ವ್ಯಕ್ತಿಗೆ ಸಿಕ್ತು 63 ಲಕ್ಷ ರೂ. ಬಹುಮಾನ..!
ನಿಶಾ ಅವರು ಗೋದಾಮು ಹಣ 42.47 ಲಕ್ಷ ರೂ ಬಾಕಿ ಉಳಿಸಿಕೊಂಡಿದ್ದು, ಪುರಸಭೆಯಲ್ಲಿ 4.78 ಲಕ್ಷ ರೂಪಾಯಿ ಕಂದಾಯ ಹಣ ಬಾಕಿ ಉಳಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಟಿಎಪಿಸಿಎಂಎಸ್ ನಿಶಾ ವಿರುದ್ಧ ಕಾನೂನು ಹೋರಾಟಕ್ಕೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ.