alex Certify BIG NEWS: ಮಾಜಿ ಕಾರ್ಪೊರೇಟರ್ ಪತಿ ನಾಪತ್ತೆ ಕೇಸ್ ಗೆ ಬಿಗ್ ಟ್ವಿಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಾಜಿ ಕಾರ್ಪೊರೇಟರ್ ಪತಿ ನಾಪತ್ತೆ ಕೇಸ್ ಗೆ ಬಿಗ್ ಟ್ವಿಸ್ಟ್

ಬೆಂಗಳೂರು: ಬೆಂಗಳೂರಿನ ಮಾಜಿ ಕಾರ್ಪೊರೇಟರ್ ಐಶ್ವರ್ಯಾ ಪತಿ ನಾಪತ್ತೆ ಪ್ರಕರಣಕ್ಕೆ ಆಘಾತಕಾರಿ ಟ್ವಿಸ್ಟ್ ಸಿಕ್ಕಿದ್ದು, ನಂದಗುಡಿ ಬಳಿ ಕಾರೊಂದು ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಬಿನ್ನಿಪೇಟೆ ವಾರ್ಡ್ ನ ಜೆಡಿಎಸ್ ಮಾಜಿ ಕಾರ್ಪೊರೇಟರ್ ಐಶ್ವರ್ಯಾ ಅವರ ಪತಿ ಲೋಹಿತ್ ನಾಪತ್ತೆಯಾಗಿದ್ದು, ಅವರ ಶೋಧಕ್ಕಾಗಿ ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ.

ರಷ್ಯಾದಿಂದ ಭೀಕರ ಹತ್ಯಾಕಾಂಡ ನಡೆದ ಉಕ್ರೇನ್ ನಲ್ಲಿ ಮಹಿಳೆಯರ ಬೆತ್ತಲೆ ಹೆಣಗಳ ರಾಶಿ

ಲೋಹಿತ್ ಅವರ ಐ-10 ಕಾರು ನಂದಗುಡಿ ಬಳಿಯ ಹಳೆಯೂರಿನಲ್ಲಿ ಪತ್ತೆಯಾಗಿದ್ದು, ಕಾರಿನ ಬಳಿ ರಕ್ತದ ಕಲೆಯ ಗುರುತುಗಳಿವೆ. ಆದರೆ ಲೋಹಿತ್ ಸುಳಿವು ಸಿಕ್ಕಿಲ್ಲ. ಇದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಬೈಕ್ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಲೋಹಿತ್, ಕಮಲಾನಗರದಲ್ಲಿ ಬೈಕ್ ಶಾಪ್ ಕೂಡ ಇಟ್ಟಿದ್ದರು. ನಾಪತ್ತೆ ಪ್ರಕರಣ ಸಂಬಂಧ ಪೊಲೀಸರು 35ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...