alex Certify BIG NEWS: ಮನೆಯಲ್ಲಿಯೇ ಕಳ್ಳತನ ಮಾಡಿ ಪ್ರೇಯಸಿ ಜೊತೆ ಗೋವಾಗೆ ಜಾಲಿ ಟ್ರಿಪ್; ಆರೋಪಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮನೆಯಲ್ಲಿಯೇ ಕಳ್ಳತನ ಮಾಡಿ ಪ್ರೇಯಸಿ ಜೊತೆ ಗೋವಾಗೆ ಜಾಲಿ ಟ್ರಿಪ್; ಆರೋಪಿ ಅರೆಸ್ಟ್

ಬೆಂಗಳೂರು: ಪ್ರೇಯಸಿ ಜೊತೆ ಅಂತರಾಜ್ಯ ಜಾಲಿ ಟ್ರಿಪ್ ಕೈಗೊಳ್ಳಲೆಂದು ಇಲ್ಲೊಬ್ಬ ಭೂಪ ತನ್ನ ಮನೆಯಲ್ಲಿಯೇ ಕಳ್ಳತನ ಮಾಡಿ ಸಿಕ್ಕಿಬಿದ್ದ ಘಟನೆ ಬೆಂಗಳೂರಿನ ಆಡುಗೋಡಿಯಲ್ಲಿ ನಡೆದಿದೆ.

ಇರ್ಫಾನ್ ಬಂಧಿತ ಆರೋಪಿ. ಇರ್ಫಾನ್ ತನ್ನ ಗೆಳತಿಯೊಂದಿಗೆ ಹೊಸ ವರ್ಷಾಚರಣೆಗೆ ಗೋವಾಗೆ ಹೋಗಲು ಪ್ಲಾನ್ ಮಾಡಿ ಮನೆಯಲ್ಲಿದ್ದ ಚಿನ್ನವನ್ನೇ ಕಳ್ಳತನ ಮಾಡಿದ್ದಾನೆ. ಮನೆಯಲ್ಲಿದ್ದ 103 ಗ್ರಾಮ್ ಚಿನ್ನ ಕದ್ದು ಮಾರಾಟ ಮಾಡಿ ಅದರಿಂದ ಬಂದ ಹಣ ತೆಗೆದುಕೊಂಡು ಪ್ರೇಯಸಿ ಜೊತೆ ಗೋವಾ ಟ್ರಿಪ್ ಹೋಗಿದ್ದಾನೆ.

ಮನೆಯಲ್ಲಿ ಬಂಗಾರ ಕಳುವಾಗಿದೆ ಎಂದು ಇರ್ಫಾನ್ ಸಹೋದರ ಆಡುಗೋಡಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಮನೆಯವರು ಒಡವೆ ಕಳ್ಳತನವಾಗಿದೆ ಎಂದು ಚಿಂತೆಯಲ್ಲಿದ್ದರೆ ಇರ್ಫಾನ್ ಮಾತ್ರ ತಲೆ ಕೆಡಿಸಿಕೊಳ್ಳದೇ ಗೋವಾಕ್ಕೆ ಹೋಗಿರುವುದು ಅನುಮಾನಕ್ಕೆ ಕಾರಣವಾಗಿದೆ.

ಆಡುಗೋಡಿ ಪೊಲೀಸರು ಇರ್ಫಾನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರೇಯಸಿಯೊಂದಿಗೆ ಟ್ರಿಪ್ ಹೋಗಲು ಹಣದ ಅವಶ್ಯಕತೆ ಇತ್ತು. ಅದಕ್ಕಾಗಿ ಒಡವೆ ಕದ್ದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...