alex Certify BIG NEWS: ಮದುವೆ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಪವಿತ್ರಾ ಲೋಕೇಶ್; ಸುಚೇಂದ್ರ ಪ್ರಸಾದ್ ಬಗ್ಗೆ ಹೇಳಿದ್ದೇನು? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮದುವೆ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಪವಿತ್ರಾ ಲೋಕೇಶ್; ಸುಚೇಂದ್ರ ಪ್ರಸಾದ್ ಬಗ್ಗೆ ಹೇಳಿದ್ದೇನು?

ಬೆಂಗಳೂರು: ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಮತ್ತೊಂದು ವಿವಾಹವಾಗಿದ್ದಾರಾ ? ಟಾಲಿವುಡ್ ನ ಖ್ಯಾತ ನಟನ ನಾಲ್ಕನೇ ಪತ್ನಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರಾ ? ಎಂಬ ಬಗ್ಗೆ ಕೆಲ ದಿನಗಳಿಂದ ಸಾಕಷ್ಟು ಸುದ್ದಿಗಳು ಹರಿದಾಡಿತ್ತು. ಪವಿತ್ರಾ ಲೋಕೇಶ್ ಸೈಬರ್ ಕ್ರೈಂ ಠಾಣೆಯ ಮೆಟ್ಟಿಲೇರಿದಾಗಿನಿಂದ ಮದುವೆ ವಿವಾದಗಳು ತಾರಕಕ್ಕೇರಿತ್ತು. ಇದೀಗ ಸ್ವತಃ ಪವಿತ್ರಾ ಲೋಕೇಶ್ ಎಲ್ಲದಕ್ಕೂ ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ನಟಿ ಪವಿತ್ರಾ ಲೋಕೇಶ್, ತಾನು ಹಾಗೂ ತೆಲುಗು ನಟ ನರೇಶ್ ಬಾಬು ನಾಲ್ಕು ವರ್ಷಗಳಿಂದ ಪರಿಚಯಸ್ತರು. ಉತ್ತಮ ಸ್ನೇಹಿತರು. ಒಂದು ಹೆಣ್ಣು-ಗಂಡು ಒಟ್ಟಿಗೆ ಓಡಾಡಿದ ಮಾತ್ರಕ್ಕೆ ಮದುವೆ ಎನ್ನಲು ಆಗುತ್ತಾ ? ಎಂದು ಪ್ರಶ್ನಿಸಿದ್ದಾರೆ.

ನನ್ನ ವಿರುದ್ಧ ಅನಗತ್ಯವಾಗಿ ಆರೋಪ ಮಾಡಲಾಗುತ್ತಿದೆ. ನಾನು ನರೇಶ್ ಬಾಬು ಅವರನ್ನು ಮದುವೆಯೇ ಆಗಿಲ್ಲ. ನಮ್ಮಿಬ್ಬರ ನಡುವೆ ಇರುವುದು ಸ್ನೇಹ ಸಂಬಂಧ. ನಾಲ್ಕು ವರ್ಷಗಳ ಹಿಂದೆ ನರೇಶ್ ಪರಿಚಯವಾದರು. ಅವರು ಉನ್ನತ ಮಟ್ಟದಲ್ಲಿರುವವರು. ನಾನು ನರೇಶ್ ಜತೆಯೂ ಕೆಲಸ ಮಾಡಿದ್ದೇನೆ. ಟಾಲಿವುಡ್ ನ ಬೇರೆ ಬೇರೆ ನಟರೊಂದಿಗೂ ಕೆಲಸ ಮಾಡಿದ್ದೇನೆ. ಹಾಗಂತ ಅವರೆಲ್ಲರೊಂದಿಗೆ ಸಂಬಂಧ ಕಟ್ಟಿಕೊಳ್ಳಲಾಗುತ್ತಾ ? 12 ವರ್ಷಗಳಿಂದ ತೆಲುಗು ಇಂಡಸ್ಟ್ರಿಯಲ್ಲಿ ಇದ್ದೇನೆ. ನರೇಶ್ ನಾನು ಸ್ನೇಹಿತರಾಗಿದ್ದರಿಂದ ನಾನು ನನ್ನ ಕಷ್ಟದ ಬಗ್ಗೆ ಅವರೊಂದಿಗೆ ಹಂಚಿಕೊಂಡಿದ್ದೆ. ಅವರು ತಮ್ಮ ನೋವನ್ನು ಹಂಚಿಕೊಂಡಿದ್ದರು. ಆದರೆ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಮಾಡುತ್ತಿರುವ ಆರೋಪಗಳು ಸುಳ್ಳು. ನರೇಶ್ ಒಬ್ಬ ಒಳ್ಳೆಯ ವ್ಯಕ್ತಿ ಎಂದು ಹೇಳಿದ್ದಾರೆ.

ನರೇಶ್ ವಿರುದ್ಧ ರಮ್ಯಾ ರಘುಪತಿ ಆರೋಪಕ್ಕೆ ಸಿಡಿದೆದ್ದ ಪವಿತ್ರಾ ಲೋಕೇಶ್, ರಮ್ಯಾ ನರೇಶ್ ಪತ್ನಿ ಎಂಬುದು ಈವರೆಗೆ ಯಾರಿಗೆ ಗೊತ್ತಿತ್ತು. ಸುಮ್ಮನೇ ಮೀಡಿಯಾ ಮುಂದೆ ಬಂದು ಪ್ರಚಾರಕ್ಕಾಗಿ ಆಕೆ ಹೀಗೆ ಮಾಡುತ್ತಿದ್ದಾರೆ. ರಮ್ಯಾ ನರೇಶ್ ಪತ್ನಿಯಾಗಿದ್ದರೆ, ಅವರಿಗೆ ನರೇಶ್ ಬೇಕು ಎಂದಾಗಿದ್ದರೆ ತನ್ನ ಪತಿ ಸರಿಯಿಲ್ಲ ಎಂದು ಯಾಕೆ ಆರೋಪ ಮಾಡಬೇಕಿತ್ತು? ನರೇಶ್ ಮನೆಗೆ ಹೋಗಿ ಹೈದರಾಬಾದ್ ನಲ್ಲಿಯೇ ಇರಬಹುದಿತ್ತು. ಕರ್ನಾಟಕಕ್ಕೆ ಬಂದು ಯಾಕೆ ಆರೋಪ ಮಾಡುತ್ತಿದ್ದಾರೆ ? ಅವರು ಇಲ್ಲಿರುವುದು ಯಾಕೆ ? ನರೇಶ್ ಹಾಗೂ ರಮ್ಯಾ ಪತಿ-ಪತ್ನಿಯೇ ಇರಬಹುದು ವೈಯಕ್ತಿಕವಾಗಿ ಸಮಸ್ಯೆಗಳಿದ್ದರೆ ಗಂಡ-ಹೆಂಡತಿ ಇಬ್ಬರು ಕುಳಿತು ಇತ್ಯರ್ಥಮಾಡಿಕೊಳ್ಳಬೇಕು ಅದನ್ನು ಬಿಟ್ಟು ಮೀಡಿಯಾ ಮುಂದೆ ಬಂದು ಯಾಕೆ ಹೇಳಿದರು ? ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ ತಮ್ಮ ಪತಿ ನಟ ಸುಚೇಂದ್ರ ಪ್ರಸಾದ್ ಬಗ್ಗೆಯೂ ಮಾತನಾಡಿರುವ ಪವಿತ್ರಾ ಲೋಕೇಶ್, ನಾನು ಕಳೆದ 5 ವರ್ಷಗಳಿಂದ ಸುಚೇಂದ್ರ ಪ್ರಸಾದ್ ಅವರಿಂದ ದೂರ ಇದ್ದೇನೆ. ನಾವು 11 ವರ್ಷ ಜೊತೆಗಿದ್ದೆವು ಹೊರತು ಮದುವೆಯಾಗಿರಲಿಲ್ಲ. ಸುಚೇಂದ್ರ ಪ್ರಸಾದ್ ಬಗ್ಗೆ ಇನ್ನೊಮ್ಮೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...