ನವದೆಹಲಿ: ದೇಶದಲ್ಲಿ ಕೊರೊನಾ ರೂಪಾಂತರಿ ವೈರಸ್ ಪ್ರಕರಣ ಹೆಚ್ಚುತ್ತಿರುವ ನಡುವೆಯೇ ಕೇಂದ್ರ ಸರ್ಕಾರ ವೈರಸ್ ವಿರುದ್ಧ ಹೋರಾಡಲು ಮತ್ತೆ ಮೂರು ಲಸಿಕೆಗಳಿಗೆ ಅನುಮೋದನೆ ನೀಡಿದೆ.
ಕಾರ್ಬೋವ್ಯಾಕ್ಸ್, ಕೊವಾವ್ಯಾಕ್ಸ್ ಎಂಬ ಎರಡು ಲಸಿಕೆ ಹಾಗೂ ಮೊಲ್ನುಪಿರವಿರ್ ಎಂಬ ಆಂಟಿ ವೈರಲ್ ಔಷಧಿಗಳನ್ನು ತುರ್ತು ಹಾಗೂ ನಿಯಂತ್ರಿತ ಬಳಕೆಗಾಗಿ ಕೇಂದ್ರ ಆರೋಗ್ಯ ಸಚಿವಿವಾಲಯ ಅನುಮೋದನೆ ನೀಡಿದೆ.
14 ತಿಂಗಳುಗಳ ನಂತರ ಪಾಲಕನೊಂದಿಗೆ ಆನೆಗಳ ಪುರ್ನರ್ಮಿಲನ: ವಿಡಿಯೋ ನೋಡಿ ಭಾವುಕರಾದ ನೆಟ್ಟಿಗರು
ಈ ಕುರಿತು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಟ್ವೀಟ್ ಮಾಡಿದ್ದು, ಕೊರೊನಾ ವಿರುದ್ಧ ಹೋರಾಡಲು ಭಾರತದಲ್ಲಿ ಮತ್ತೆ ಮೂರು ಲಸಿಕೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.