alex Certify 14 ತಿಂಗಳುಗಳ ನಂತರ ಪಾಲಕನೊಂದಿಗೆ ಆನೆಗಳ ಪುರ್ನರ್ಮಿಲನ: ವಿಡಿಯೋ ನೋಡಿ ಭಾವುಕರಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

14 ತಿಂಗಳುಗಳ ನಂತರ ಪಾಲಕನೊಂದಿಗೆ ಆನೆಗಳ ಪುರ್ನರ್ಮಿಲನ: ವಿಡಿಯೋ ನೋಡಿ ಭಾವುಕರಾದ ನೆಟ್ಟಿಗರು

ಆನೆಗಳು ಅಸಾಧಾರಣವಾದ ಬುದ್ಧಿವಂತ ಪ್ರಾಣಿಗಳಾಗಿದ್ದು, ವ್ಯಾಪಕವಾದ ಭಾವನೆಗಳನ್ನು ಹೊಂದಿರುತ್ತವೆ. ದಢೂತಿ ಪ್ರಾಣಿಯಾಗಿದ್ರೂ ಕೂಡ ಅತ್ಯಂತ ಸ್ನೇಹಪರ, ಪ್ರೀತಿಯನ್ನು ಇವು ವ್ಯಕ್ತಪಡಿಸುತ್ತದೆ.

ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ವಿಶೇಷ ಬಾಂಧವ್ಯವನ್ನು ಬಿಂಬಿಸುವ ಇಂತಹ ಹೃದಯಸ್ಪರ್ಶಿ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಜನರನ್ನು ಭಾವುಕರನ್ನಾಗಿಸಿದೆ. ಇದೀಗ ಥಾಯ್ಲೆಂಡ್‌ನ ಅಭಯಾರಣ್ಯದಲ್ಲಿ ಆನೆಗಳ ಹಿಂಡು ಹಿಂತಿರುಗಿ ತಮ್ಮನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿಯನ್ನು 14 ತಿಂಗಳುಗಳ ನಂತರ ಮತ್ತೆ ಭೇಟಿಯಾಗಿರುವ ಸುಂದರ ವಿಡಿಯೋ ವೈರಲ್ ಆಗಿದೆ.

ಟ್ವಿಟ್ಟರ್ ಬಳಕೆದಾರರಾದ ಬ್ಯುಟೆಂಗೆಬೀಡೆನ್ ಅವರು ವಿಡಿಯೋ ಹಂಚಿಕೊಂಡಿದ್ದು, ಆನೆಗಳ ಹಿಂಡು ತಮ್ಮ ಪಾಲಕನ ಕಡೆಗೆ ವೇಗವಾಗಿ ನಡೆದು ಬರುತ್ತಿದೆ. ವಿಡಿಯೋದಲ್ಲಿ, ಡೆರೆಕ್ ಥಾಂಪ್ಸನ್ ಎಂದು ಗುರುತಿಸಲಾದ ವ್ಯಕ್ತಿ, ಆನೆಗಳು ಅವನ ಬಳಿಗೆ ಬರುತ್ತಿದ್ದಂತೆ ಆತ ಆಳವಿಲ್ಲದ ನೀರಿನಲ್ಲಿ ನಿಂತಿರುವುದನ್ನು ಕಾಣಬಹುದು. ಆನೆಗಳು ಥಾಂಪ್ಸನ್ ಅವರನ್ನು ತಮ್ಮ ಸೊಂಡಿಲಿನಿಂದ ಸ್ವಾಗತಿಸುತ್ತವೆ ಮತ್ತು ಅಪ್ಪಿಕೊಳ್ಳುತ್ತವೆ. ಡೆರೆಕ್ ಕೂಡ ಖುಷಿಯಿಂದ ಆನೆಗಳನ್ನು ತನ್ನ ಕೈಯಿಂದ ತಟ್ಟಿ ಮುದ್ದಾಡಿದ್ದಾನೆ.

ಕೈ-ಕಾಲುಗಳಿಲ್ಲದ ದೆಹಲಿಯ ವ್ಯಕ್ತಿಯ ಸ್ಪೂರ್ತಿ ಕಂಡು ಆನಂದ್ ಮಹೀಂದ್ರಾ ಮೆಚ್ಚುಗೆ..!

ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು, ವೈರಲ್ ಆಗಿದೆ. ಆನೆಗಳು 14 ತಿಂಗಳ ನಂತರ ತಮ್ಮ ಪಾಲನೆ ಮಾಡಿದಾತನೊಂದಿಗೆ ಮತ್ತೆ ಒಂದಾಗಿದೆ ಎಂದು ಶೀರ್ಷಿಕೆಯನ್ನು ನೀಡಲಾಗಿದೆ. ಥಾಯ್ಲೆಂಡ್‌ನ ಎಲಿಫೆಂಟ್ ನೇಚರ್ ಪಾರ್ಕ್‌ನಲ್ಲಿ ಈ ಹೃದಯಸ್ಪರ್ಶಿ ಘಟನೆ ನಡೆದಿದೆ. ಆನೆಗಳ ಈ ನಡೆ ಜನರನ್ನು ಭಾವುಕರನ್ನಾಗಿಸಿದೆ.

— Buitengebieden (@buitengebieden_) December 23, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...