ಬೆಂಗಳೂರು: ಕೊರೊನಾ ಮೂರನೇ ಅಲೆ ಆತಂಕದ ನಡುವೆಯೇ ಮಕ್ಕಳಲ್ಲಿ ವೈರಲ್ ಜ್ವರ ಹೆಚ್ಚುತ್ತಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನ ಮಕ್ಕಳು ಹೈರಾಣಾಗಿದ್ದಾರೆ. ಕಳೆದ ಒಂದು ವಾರದಿಂದ ಮಕ್ಕಳಲ್ಲಿ ವಿಪರೀತ ಸ್ವರ ಕಾಣಿಸಿಕೊಳ್ಳುತ್ತಿದ್ದು, ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಿದೆ. ಇದರಿಂದ ಆಕ್ಸಿಜನ್, ಐಸಿಯು ಬೆಡ್ ಗಳು ಭರ್ತಿಯಾಗಿವೆ.
ನಗರದ ಕೆ.ಸಿ.ಜನರಲ್ ಆಸ್ಪತ್ರೆ, ವಿಕ್ಟೋರೊಯಾ, ಬೌರಿಂಗ್, ವಾಣಿ ವಿಲಾಸ ಆಸ್ಪತ್ರೆಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳು ದಾಖಲಾಗುತ್ತಿದ್ದು, ವಿಪರೀತ ಜ್ವರ, ನ್ಯೂಮೋನಿಯಾ, ರಕ್ತಹೀನತೆ, ಅಸ್ತಮ, ಡೆಂಗ್ಯೂ ಸೇರಿದಂತೆ ವಿವಿಧ ಕಾಯಿಲೆಗಳಿಂದ ಮಕ್ಕಳು ಬಳಲುತ್ತಿದ್ದಾರೆ. ಆಸ್ಪತ್ರೆ ಬೆಡ್ ಗಳು ಭರ್ತಿಯಾಗಿವೆ. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಪ್ರತಿ ದಿನ 140-150 ಮಕ್ಕಳು ದಾಖಲಾಗುತ್ತಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಮಕ್ಕಳಿಗಾಗಿ ಮೀಸಲಿಟ್ಟ 36 ಬೆಡ್, ಐಸಿಯುನ 10 ಬೆಡ್ ಗಳಲ್ಲಿ 6 ಬೆಡ್ ಗಳು ಭರ್ತಿಯಾಗಿವೆ.
ನಂಬಲಸಾಧ್ಯವಾದರೂ ಇದು ಸತ್ಯ…! ತಿನ್ನಲು ಯೋಗ್ಯವಲ್ಲ ಈ ವಿಚಿತ್ರ ಕೋಳಿ
ವಾಣಿ ವಿಲಾಸ ಆಸ್ಪತ್ರೆಯಲ್ಲಿ 110 ಬೆಡ್ ಗಳಲ್ಲಿ 70 ಬೆಡ್ ಗಳು ಭರ್ತಿಯಾಗಿದ್ದು, ವಿಕ್ಟೋರಿಯಾದಲ್ಲಿ 80 ಬೆಡ್ ಗಳು ಭರ್ತಿಯಾಗಿವೆ ಮಕ್ಕಳಲ್ಲಿ ಇದೇ ರೀತಿ ಜ್ವರ ಹೆಚ್ಚುತ್ತಿದ್ದಲ್ಲಿ ರಾಜಧಾನಿ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸೆಗೆ ತೊಂದರೆಯಾಗುವ ಭೀತಿ ಎದುರಾಗಿದೆ.