ಬೀದರ್: ಮಂಗಳೂರಿನ ಮಳಲಿ ಮಸೀದಿ ವಿವಾದ ಇದೀಗ ರಾಜ್ಯದ ಜಿಲ್ಲೆ ಜಿಲ್ಲೆಗಳಿಗೂ ವ್ಯಾಪಿಸಿದ್ದು, ಬೆಳಗಾವಿ, ಬೀದರ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿನ ಮಸೀದಿಗಳಿರುವ ಸ್ಥಳದಲ್ಲಿ ದೇವಾಲಯಗಳಿತ್ತು ಎಂಬ ಚರ್ಚೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಇದೀಗ ಬೀದರ್ ಜಿಲ್ಲೆಯ ಬಸವಕಲ್ಯಾಣದ ಅನುಭವ ಮಂಟಪ ದರ್ಗಾ ಆಗಿದೆ ಎಂದು ಶಾಸಕ ಶರಣು ಸಲಗ ಹೇಳಿಕೆ ನೀಡಿದ್ದು, ಕೂತುಹಲಕ್ಕೆ ಕಾರಣವಾಗಿದೆ. ಬಸವಣ್ಣನವರ 12ನೇ ಶತಮಾನದ ಕಾಲದಲ್ಲಿದ್ದ ಅನುಭವ ಮಂಟಪ ದರ್ಗಾವನ್ನಾಗಿ ಮಾಡಲಾಗಿದೆ. ಶೈವ ಪರಂಪರೆಯ ಕಟ್ಟಡದ ರೂಪದಲ್ಲಿ ಪೀರ್ ಪಾಷಾ ದರ್ಗಾ ಇದ್ದು, ಅನುಭವ ಮಂಟಪದ ಜಾಗವನ್ನು ದರ್ಗಾ ಮಾಡಲಾಗಿದೆ ಎಂದು ಜನರು ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕಾರ್ ರಿವರ್ಸ್ ತೆಗೆಯುವಾಗಲೇ ದುರಂತ: ಚಕ್ರಕ್ಕೆ ಸಿಲುಕಿ ಕಂದಮ್ಮ ಸಾವು
ಅಲ್ಲದೇ ಪೀಪ್ ಪಾಷಾ ದರ್ಗಾದಲ್ಲಿ ಹಿಂದೂ ದೇವರ ಹಲವು ಕುರುಹುಗಳು ಇವೆ. ದೇಗುಲದ ರೀತಿ ಮಂಟಪ, ಗೋಡೆಗಳ ಮೇಲೆ ದೇವರ ಮೂರ್ತಿ, ನೀರಾನೆ ರೀತಿಯ ಕೆತ್ತನೆಗಳನ್ನು ಕಾಣಬಹುದಾಗಿದೆ. ಅನುಭವ ಮಂಟಪ ಇದ್ದ ಜಾಗದಲ್ಲಿ ದರ್ಗಾ ನಿರ್ಮಿಸಲಾಗಿದ್ದು, ಆ ಜಾಗ ಮತ್ತೆ ಅನುಭವ ಮಂಟಪವಾಗಬೇಕು ಎಂದು ಆಗ್ರಹಿಸಿದ್ದಾರೆ.