alex Certify BIG NEWS: ಭೀಕರ ಸರಣಿ ಅಪಘಾತ; ಐಷಾರಾಮಿ ಕಾರುಗಳು ಸಂಪೂರ್ಣ ನುಜ್ಜುಗುಜ್ಜು; ಟಿಪ್ಪರ್ ಚಾಲಕ ಎಸ್ಕೇಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭೀಕರ ಸರಣಿ ಅಪಘಾತ; ಐಷಾರಾಮಿ ಕಾರುಗಳು ಸಂಪೂರ್ಣ ನುಜ್ಜುಗುಜ್ಜು; ಟಿಪ್ಪರ್ ಚಾಲಕ ಎಸ್ಕೇಪ್

ಬೆಂಗಳೂರು: ಸಿಗ್ನಲ್ ನಲ್ಲಿ ನಿಂತಿದ್ದ ಕಾರಿಗೆ ಟಿಪ್ಪರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ 7 ವಾಹನಗಳು ಸಂಪೂರ್ಣ ಜಖಂಗೊಂಡಿರುವ ಘಟನೆ ಬೆಂಗಳೂರಿನ ದೇವನಹಳ್ಳಿಯ ಕೆಂಪೇಗೌಡ ವೃತ್ತದಲ್ಲಿ ನಡೆದಿದೆ.

ಸರಣಿ ಅಪಘಾತದಲ್ಲಿ ಒಂದರ ಹಿಂದೊಂದರಂತೆ ಒಟ್ಟು 7 ಕಾರುಗಳು ನುಜ್ಜುಗುಜ್ಜಾಗಿವೆ. ಏರ್ ಪೋರ್ಟ್ ರಸ್ತೆಯಲ್ಲಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಸಂಭವಿಸಿ ವಾಹನ ಸವಾರರು ಪರದಾಡಿದ್ದಾರೆ.

ಅಪಘಾತದಲ್ಲಿ BMW, ಥಾರ್, ಇಟಿಯೋಸ್ ಸೇರಿ ಐಷಾರಾಮಿ ಕಾರುಗಳು ಜಖಂಗೊಂಡಿದ್ದು, ಹಲವರಿಗೆ ಗಾಯಗಳಾಗಿವೆ. ಟಿಪ್ಪರ್ ಚಾಲಕ ರಸ್ತೆಯಲ್ಲಿಯೇ ಟಿಪ್ಪರ್ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಪೊಲೀಸರು ಟಿಪ್ಪರ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...