alex Certify BIG NEWS: ಭಾರಿ ಚರ್ಚೆಗೆ ಕಾರಣವಾಯ್ತು ರಾಹುಲ್ ಗಾಂಧಿ ಟೀ-ಶರ್ಟ್ ಬೆಲೆ; ಭಾರತ್ ದೇಖೋ ಎಂದ BJP | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರಿ ಚರ್ಚೆಗೆ ಕಾರಣವಾಯ್ತು ರಾಹುಲ್ ಗಾಂಧಿ ಟೀ-ಶರ್ಟ್ ಬೆಲೆ; ಭಾರತ್ ದೇಖೋ ಎಂದ BJP

ನವದೆಹಲಿ: ಕಾಂಗ್ರೆಸ್ ನ ಭಾರತ್ ಜೋಡೋ ಪಾದಯಾತ್ರೆ ನಡುವೆಯೇ ಸಂಸದ ರಾಹುಲ್ ಗಾಂಧಿ ಧರಿಸಿರುವ ಟಿ-ಶರ್ಟ್ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ.

ಕನ್ಯಾಕುಮಾರಿಯಿಂದ ಆರಂಭವಾಗಿರುವ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಧರಿಸಿರುವ ದುಬಾರಿ ಬೆಲೆಯ ಬರ್ಬರಿ ಬ್ರ್ಯಾಂಡ್ ನ ಟಿ-ಶರ್ಟ್ ಬಗ್ಗೆ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ವಾಕ್ಸಮರಕ್ಕೆ ಮುಂದಾಗಿದೆ.

ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಧರಿಸಿರುವ ಬಿಳಿ ಬಣ್ಣದ ಟೀ-ಶರ್ಟ್ ಬೆಲೆ ಬರೋಬ್ಬರಿ 41,257 ರೂಪಾಯಿಯದ್ದಾಗಿದ್ದು, ಬರ್ಬರಿ ಬ್ರ್ಯಾಂಡ್ ನದ್ದಾಗಿದೆ. ಈ ಬಗ್ಗೆ ಬಿಜೆಪಿ ಟೀ-ಶರ್ಟ್ ನ ಬೆಲೆ, ಬ್ರ್ಯಾಂಡ್ ಸಮೇತವಾಗಿ ಫೋಟೋ ಶೇರ್ ಮಾಡಿದ್ದು ಭಾರತ್ ದೇಖೋ ಎಂದು ಟ್ವೀಟ್ ಮಾಡಿದೆ.

ಬಡವರ ಸಂಕಷ್ಟಕ್ಕೆ ಕಾಂಗ್ರೆಸ್ ಸದಾ ಸ್ಪಂದಿಸುತ್ತದೆ ಎಂದು ಹೇಳುವ ಸಂಸದ ರಾಹುಲ್ ಗಾಂಧಿ ಇದೀಗ ದುಬಾರಿ ಬೆಲೆಯ ಟೀ-ಶರ್ಟ್, ಶೂ ಧರಿಸಿ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...