alex Certify BIG NEWS: ಭಾರತೀಯ ರೈಲ್ವೆಯಿಂದ ವಿಶಿಷ್ಟ ಸಾಧನೆ; ವಿಶ್ವದ ಅತ್ಯಂತ ಶಕ್ತಿಶಾಲಿ ರೈಲು ಎಂಜಿನ್‌ ನಿರ್ಮಾಣ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರತೀಯ ರೈಲ್ವೆಯಿಂದ ವಿಶಿಷ್ಟ ಸಾಧನೆ; ವಿಶ್ವದ ಅತ್ಯಂತ ಶಕ್ತಿಶಾಲಿ ರೈಲು ಎಂಜಿನ್‌ ನಿರ್ಮಾಣ….!

ಭಾರತವು ಕಳೆದ ಕೆಲವು ವರ್ಷಗಳಿಂದ ವಿಶ್ವದ ಅತ್ಯಂತ ಶಕ್ತಿಶಾಲಿ ರೈಲು ಎಂಜಿನ್‌ಗಳನ್ನು ತಯಾರಿಸುತ್ತಿದೆ. ಈ ಎಂಜಿನ್‌ಗಳನ್ನು ಮೇಕ್ ಇನ್ ಇಂಡಿಯಾ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಶಕ್ತಿಶಾಲಿ ಎಂಜಿನ್‌ಗಳ ವಿಶೇಷವೆಂದರೆ ಇವು 12 ಸಾವಿರ ಅಶ್ವಶಕ್ತಿ ಸಾಮರ್ಥ್ಯ ಹೊಂದಿವೆ. ಭಾರತವನ್ನು ಹೊರತುಪಡಿಸಿ ವಿಶ್ವದ 5 ದೇಶಗಳಾದ ರಷ್ಯಾ, ಚೀನಾ, ಫ್ರಾನ್ಸ್, ಜರ್ಮನಿ ಮತ್ತು ಸ್ವೀಡನ್ ಮಾತ್ರ ಇಂತಹ ಎಂಜಿನ್‌ಗಳನ್ನು ತಯಾರಿಸುತ್ತವೆ.

ಫ್ರಾನ್ಸ್‌ ಕಂಪನಿಯ ಸಹಯೋಗದಲ್ಲಿ ಈ ಎಂಜಿನ್‌ಗಳನ್ನು ಬಿಹಾರದ ಮಾಧೇಪುರದಲ್ಲಿ  ತಯಾರಿಸಲಾಗುತ್ತಿದೆ. WAG-12 B ಹೆಸರಿನ ಈ ಇಂಜಿನ್‌ಗಳ ತೂಕ 180 ಟನ್‌ಗಳು. ಭಾರತದಲ್ಲಿ ಇದುವರೆಗೆ ಇಂತಹ 100 ಶಕ್ತಿಶಾಲಿ ಎಂಜಿನ್‌ಗಳನ್ನು ತಯಾರಿಸಲಾಗಿದೆ. ಇನ್ನೂ 800 ಎಂಜಿನ್‌ಗಳನ್ನು ತಯಾರಿಸಲು ಯೋಜನೆ ಹಾಕಿಕೊಳ್ಳಲಾಗಿದೆ.

ಎಂಜಿನ್‌ನ ವಿಶೇಷತೆ

ಈ ಎಂಜಿನ್ ಗಂಟೆಗೆ 120 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ. ಇವುಗಳ  ಸಹಾಯದಿಂದ ಭಾರತದಲ್ಲಿ ಸರಕು ರೈಲುಗಳ ಸರಾಸರಿ ವೇಗ ಮತ್ತು ಲೋಡ್ ಸಾಗಿಸುವ ಸಾಮರ್ಥ್ಯವು ಸುಧಾರಿಸುತ್ತಿದೆ. ಈ ಎಂಜಿನ್‌ಗಳು ಅವಳಿ ಬೋ-ಬೋ ವಿನ್ಯಾಸವನ್ನು ಹೊಂದಿವೆ. ಈ ರೈಲು ಎಂಜಿನ್‌ನ ಆಕ್ಸಲ್ ಲೋಡ್ 22.5 ಟನ್‌ಗಳಾಗಿದ್ದು, ಇದನ್ನು 25 ಟನ್‌ಗಳಿಗೆ ಹೆಚ್ಚಿಸಬಹುದು. ಎತ್ತರದ ಪ್ರದೇಶಗಳಲ್ಲಿ ಸರಕುಗಳನ್ನು ಸಾಗಿಸಬಹುದು.

ವಿಶೇಷವೆಂದರೆ ಕಡಿಮೆ ಲೋಡ್ ಇದ್ದಲ್ಲಿ ಎರಡು ಎಂಜಿನ್‌ಗಳಲ್ಲಿ ಒಂದನ್ನು ಸ್ಥಗಿತಗೊಳಿಸಿದ ನಂತರವೂ ಕೆಲಸ ಮಾಡಬಹುದು.ಇದರ ಉದ್ದ 35 ಮೀಟರ್, 1000 ಲೀಟರ್ ಹೆಚ್ಚಿನ ಕಂಪ್ರೆಸರ್ ಸಾಮರ್ಥ್ಯದ ಎರಡು ಎಂಆರ್ ಟ್ಯಾಂಕ್‌ಗಳನ್ನು ಅಳವಡಿಸಲಾಗಿದೆ. ಇದು ದೀರ್ಘಾವಧಿಯ ಹೊರೆಗಳನ್ನು ಸುಲಭವಾಗಿ ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ರಷ್ಯಾದಲ್ಲಿ 17 ಸಾವಿರಕ್ಕೂ ಹೆಚ್ಚು ಅಶ್ವಶಕ್ತಿಯ ಸಾಮರ್ಥ್ಯದ ಎಂಜಿನ್‌ಗಳನ್ನು ತಯಾರಿಸಲಾಗಿದ್ದು, ಜರ್ಮನಿ ಕೂಡ 16 ಸಾವಿರಕ್ಕೂ ಹೆಚ್ಚು ಅಶ್ವಶಕ್ತಿಯ ಸಾಮರ್ಥ್ಯದ ಎಂಜಿನ್‌ಗಳನ್ನು ತಯಾರಿಸಿದೆ.

ಈ ಎಂಜಿನ್ ಭಾರತದಲ್ಲಿನ ವಿಪರೀತ ಶಾಖ ಮತ್ತು ತೇವಾಂಶವನ್ನು ಸಹ ತಡೆದುಕೊಳ್ಳಬಲ್ಲದು. ಇನ್ಸುಲೇಟೆಡ್ ಗೇಟ್ ಬೈಪೋಲಾರ್ ಟ್ರಾನ್ಸಿಸ್ಟರ್ (ಐಜಿಬಿಟಿ) ಆಧಾರಿತ ಪ್ರೊಪಲ್ಷನ್ ತಂತ್ರಜ್ಞಾನದೊಂದಿಗೆ ಇದು ಸುಸಜ್ಜಿತವಾಗಿದೆ. ಎಲೆಕ್ಟ್ರಿಕ್ ಲೋಕೋಮೋಟಿವ್ ಪುನರುತ್ಪಾದಕ ಬ್ರೇಕಿಂಗ್ ಬಳಕೆಯಿಂದಾಗಿ ಶಕ್ತಿಯನ್ನು ಇದು ಉಳಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...