alex Certify BIG NEWS: ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ಉದ್ಯೋಗಿಗಳಿಗೆ ಇಲ್ಲಿದೆ ʼಬಂಪರ್‌ʼ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ಉದ್ಯೋಗಿಗಳಿಗೆ ಇಲ್ಲಿದೆ ʼಬಂಪರ್‌ʼ ಸುದ್ದಿ

ಇತ್ತೀಚಿನ ವರದಿಯ ಪ್ರಕಾರ ಖಾಸಗಿ ವಲಯದಲ್ಲಿ ಉದ್ಯೋಗಿಗಳ ವೇತನ ಶೇ.8-12ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಹೆಚ್ಚು ಅನುಕೂಲಕರ ಹೂಡಿಕೆಯ ದೃಷ್ಟಿಕೋನದಿಂದಾಗಿ, ಇಂಡಿಯಾ ಇಂಕ್ ಈ ವರ್ಷ ಸರಾಸರಿ ಶೇಕಡಾ 9 ರಷ್ಟು ಸಂಬಳ ಹೆಚ್ಚಳವನ್ನು ನೀಡುವ ಸಾಧ್ಯತೆಯಿದೆ. ಹೂಡಿಕೆಯ ದೃಷ್ಟಿಕೋನ ಕೂಡ ಅನುಕೂಲಕರವಾಗಿದೆ. 2019ರಲ್ಲಿ ಸಂಬಳ ಏರಿಕೆಯು ಶೇಕಡಾ 7ರಷ್ಟಿದ್ದರೆ 2022ರಲ್ಲಿ ಇದು ಶೇಕಡಾ 9ರಷ್ಟಾಗಲಿದೆ ಎಂದು ವರದಿಯು ಹೇಳಿದೆ.

ಸ್ಟಾರ್ಟಪ್​ಗಳು ಹಾಗೂ ನ್ಯೂ ಏಜ್​ ಕಾರ್ಪೋರೇಷನ್​ಗಳು ಸಾಮಾನ್ಯವಾಗಿ ಶೇಕಡಾ 12ರಷ್ಟು ಹೆಚ್ಚಳ ನೀಡುವ ಮೂಲಕ ಈ ಪ್ರವೃತ್ತಿಯನ್ನು ಮುನ್ನೆಡಸಲಿವೆ. ಬ್ಯಾಂಕಿಂಗ್​ ವಲಯಗಳು, ಹಣಕಾಸು ಸೇವೆಗಳ ಉದ್ಯಮ, ಆಸ್ತಿ, ನಿರ್ಮಾಣ ವಲಯ ಹಾಗೂ ಉತ್ಪಾದನೆಗಳು ಸೇರಿವೆ.

ಡಿಜಿಟಲ್​ ರೂಪಾಂತರಕ್ಕೆ ಒಳಗಾಗುತ್ತಿರುವ ಇ ಕಾಮರ್ಸ್​ ಹಾಗೂ ಇತರೆ ಕ್ಷೇತ್ರಗಳ ಬೆಳವಣಿಗೆಗಳೊಂದಿಗೆ ಕಂಪ್ಯೂಟರ್​​ ಸೈನ್ಸ್​ ಹಿನ್ನೆಲೆಯನ್ನು ಹೊಂದಿರುವ ಉನ್ನತಾಧಿಕಾರಿಗಳು, ಡೇಟಾ ವಿಜ್ಞಾನಿಗಳು, ವೆಬ್​ ಡೆವಲಪರ್​​ ಹಾಗೂ ಕ್ಲೌಡ್​​ ಆರ್ಕಿಟೆಕ್ಟ್​​ಗಳು ಹೆಚ್ಚಿನ ಬೇಡಿಕೆಯಲ್ಲಿರುತ್ತಾರೆ ಎಂದು ವರದಿಗಳು ಹೇಳಿವೆ.

ಇತರೆ ಉದ್ಯೋಗ ವಲಯಗಳಲ್ಲಿ ಇದೇ ರೀತಿಯ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರುವ ವೃತ್ತಿಪರರಿಗಿಂತ ತಂತ್ರಜ್ಞರ ಸರಾಸರಿ ವೇತನವು ಹೆಚ್ಚಾಗಿರುತ್ತದೆ ಎಂದು ಈ ವರದಿಯು ಹೇಳಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಉದ್ಯೋಗದಾತರು ಸಾಂಕ್ರಾಮಿಕ ರೋಗದ ಯಾವುದೇ ಮಹತ್ವದ ಪರಿಣಾಮವನ್ನು ನಿರೀಕ್ಷಿಸುವುದಿಲ್ಲ. ಇದರ ಜೊತೆಯಲ್ಲಿ ಭವಿಷ್ಯದ ವ್ಯಾಪಾರ ಯೋಜನೆಗಳ ಬಗ್ಗೆ ಉತ್ಸುಕರಾಗಿದ್ದಾರೆ ಎಂದು ವರದಿ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...