ಇತ್ತೀಚಿನ ವರದಿಯ ಪ್ರಕಾರ ಖಾಸಗಿ ವಲಯದಲ್ಲಿ ಉದ್ಯೋಗಿಗಳ ವೇತನ ಶೇ.8-12ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಹೆಚ್ಚು ಅನುಕೂಲಕರ ಹೂಡಿಕೆಯ ದೃಷ್ಟಿಕೋನದಿಂದಾಗಿ, ಇಂಡಿಯಾ ಇಂಕ್ ಈ ವರ್ಷ ಸರಾಸರಿ ಶೇಕಡಾ 9 ರಷ್ಟು ಸಂಬಳ ಹೆಚ್ಚಳವನ್ನು ನೀಡುವ ಸಾಧ್ಯತೆಯಿದೆ. ಹೂಡಿಕೆಯ ದೃಷ್ಟಿಕೋನ ಕೂಡ ಅನುಕೂಲಕರವಾಗಿದೆ. 2019ರಲ್ಲಿ ಸಂಬಳ ಏರಿಕೆಯು ಶೇಕಡಾ 7ರಷ್ಟಿದ್ದರೆ 2022ರಲ್ಲಿ ಇದು ಶೇಕಡಾ 9ರಷ್ಟಾಗಲಿದೆ ಎಂದು ವರದಿಯು ಹೇಳಿದೆ.
ಸ್ಟಾರ್ಟಪ್ಗಳು ಹಾಗೂ ನ್ಯೂ ಏಜ್ ಕಾರ್ಪೋರೇಷನ್ಗಳು ಸಾಮಾನ್ಯವಾಗಿ ಶೇಕಡಾ 12ರಷ್ಟು ಹೆಚ್ಚಳ ನೀಡುವ ಮೂಲಕ ಈ ಪ್ರವೃತ್ತಿಯನ್ನು ಮುನ್ನೆಡಸಲಿವೆ. ಬ್ಯಾಂಕಿಂಗ್ ವಲಯಗಳು, ಹಣಕಾಸು ಸೇವೆಗಳ ಉದ್ಯಮ, ಆಸ್ತಿ, ನಿರ್ಮಾಣ ವಲಯ ಹಾಗೂ ಉತ್ಪಾದನೆಗಳು ಸೇರಿವೆ.
ಡಿಜಿಟಲ್ ರೂಪಾಂತರಕ್ಕೆ ಒಳಗಾಗುತ್ತಿರುವ ಇ ಕಾಮರ್ಸ್ ಹಾಗೂ ಇತರೆ ಕ್ಷೇತ್ರಗಳ ಬೆಳವಣಿಗೆಗಳೊಂದಿಗೆ ಕಂಪ್ಯೂಟರ್ ಸೈನ್ಸ್ ಹಿನ್ನೆಲೆಯನ್ನು ಹೊಂದಿರುವ ಉನ್ನತಾಧಿಕಾರಿಗಳು, ಡೇಟಾ ವಿಜ್ಞಾನಿಗಳು, ವೆಬ್ ಡೆವಲಪರ್ ಹಾಗೂ ಕ್ಲೌಡ್ ಆರ್ಕಿಟೆಕ್ಟ್ಗಳು ಹೆಚ್ಚಿನ ಬೇಡಿಕೆಯಲ್ಲಿರುತ್ತಾರೆ ಎಂದು ವರದಿಗಳು ಹೇಳಿವೆ.
ಇತರೆ ಉದ್ಯೋಗ ವಲಯಗಳಲ್ಲಿ ಇದೇ ರೀತಿಯ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರುವ ವೃತ್ತಿಪರರಿಗಿಂತ ತಂತ್ರಜ್ಞರ ಸರಾಸರಿ ವೇತನವು ಹೆಚ್ಚಾಗಿರುತ್ತದೆ ಎಂದು ಈ ವರದಿಯು ಹೇಳಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಉದ್ಯೋಗದಾತರು ಸಾಂಕ್ರಾಮಿಕ ರೋಗದ ಯಾವುದೇ ಮಹತ್ವದ ಪರಿಣಾಮವನ್ನು ನಿರೀಕ್ಷಿಸುವುದಿಲ್ಲ. ಇದರ ಜೊತೆಯಲ್ಲಿ ಭವಿಷ್ಯದ ವ್ಯಾಪಾರ ಯೋಜನೆಗಳ ಬಗ್ಗೆ ಉತ್ಸುಕರಾಗಿದ್ದಾರೆ ಎಂದು ವರದಿ ಹೇಳಿದೆ.