ಅಹಮದಾಬಾದ್: ಇಂಗ್ಲೆಂಡ್ ನಲ್ಲಿ ಪತ್ತೆಯಾಗಿದ್ದ ಕೊರೊನಾ ಹೊಸ ರೂಪಾಂತರಿ ವೈರಸ್ ಇದೀಗ ಗುಜರಾತ್ ನಲ್ಲಿ ಪತ್ತೆಯಾಗಿದ್ದು, ದೇಶದಲ್ಲಿ ರೂಪಾಂತರಿ ವೈರಸ್ ಬಗ್ಗೆ ಮತ್ತೆ ಆತಂಕ ಎದುರಾಗುತ್ತಿದೆ.
ಇತ್ತೀಚೆಗೆ ಮುಂಬೈನಲ್ಲಿ ಎಕ್ಸ್ ಇ ರೂಪಾಂತರಿ ವೈರಸ್ ಪತ್ತೆಯಾಗಿತ್ತು ಎಂದು ವರದಿಯಾಗಿತ್ತು. ಆದರೆ ಅಂತಹ ಯಾವುದೇ ವೈರಸ್ ಪತ್ತೆಯಾಗಿಲ್ಲ ಎಂದು ಅಲ್ಲಿನ ಆರೋಗ್ಯ ಸಚಿವರು ಮಾಹಿತಿ ನೀಡಿದ್ದರು. ಆದರೆ ಇದೀಗ ಗುಜರಾತ್ ನ ವಡೋದರಾದ ಗೋತ್ರಿ ಎಂಬ ಏರಿಯಾದಲ್ಲಿ ಈ ವೈರಸ್ ಪತ್ತೆಯಾಗಿದೆ.
BIG NEWS: ವಿಲ್ ಸ್ಮಿತ್ಗೆ ಆಸ್ಕರ್ ಸಮಾರಂಭದಿಂದ 10 ವರ್ಷಗಳ ಕಾಲ ನಿಷೇಧ
ಇಲ್ಲಿನ 60 ವರ್ಷದ ವ್ಯಕ್ತಿಯಲ್ಲಿ ಎಕ್ಸ್ ಇ ವೈರಸ್ ಪತ್ತೆಯಾಗಿದ್ದು, ಅವರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದರೆ ವ್ಯಕ್ತಿಗೆ ಮಾರ್ಚ್ 11ರಂದು ಕೋವಿಡ್ ಸೋಂಕು ದೃಢಪಟ್ಟಿತ್ತು. ನಂತರ ರಕ್ತ, ಗಂಟಲು ದ್ರವವನ್ನು ಜಿನೋಮ್ ಸಿಕ್ವೇನ್ಸಿಗೆ ಕಳುಹಿಸಲಾಗಿದ್ದು, ಇದೀಗ ವರದಿಯಲ್ಲಿ ಎಕ್ಸ್ ಇ ವೈರಸ್ ದೃಢಪಟ್ಟಿದೆ.