ಬೆಂಗಳೂರು: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬ್ಯಾಂಕಿಂಗ್ ಕ್ಷೇತ್ರದ ಇತಿಹಾಸದಲ್ಲಿಯೇ ಐತಿಹಾಸಿಕ ನಿರ್ಣಯಗಳನ್ನು ಕೈಗೊಂಡಿದೆ ಎಂದು ಸಚಿವ ಪ್ರಹ್ಲಾದ್ ಜೋಶಿ ಶ್ಲಾಘಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ಬ್ಯಾಂಕ್ ದಿವಾಳಿ ಹಂತ ತಲುಪಿದ್ದರೂ ಠೇವಣಿದಾರರು ಹಣ ಪಡೆಯಬಹುದು. ದಿವಾಳಿ ಸಂದರ್ಭದಲ್ಲಿ ಠೇವಣಿದಾರರ ಹಣ ಕೊಡಲಾಗದಿದ್ದರೆ 90 ದಿನಗಳಲ್ಲಿ 5 ಲಕ್ಷದವರೆಗೆ ಠೇವಣಿ ವಾಪಸ್ ಕೊಡಬೇಕು ಎಂದರು.
ಗುರುರಾಘವೇಂದ್ರ ಸಹಕಾರಿ ಬ್ಯಾಂಕ್ ಪ್ರಕರಣದ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಕೇಂದ್ರದ ಗಮನಕ್ಕೆ ತಂದಿದ್ದರು. ಠೇವಣಿದಾರರ ಹಣ ಕೊಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಈ ನಿಯಮ ಎಲ್ಲಾ ಬ್ಯಾಂಕ್ ಗಳಿಗೂ ಅನ್ವಯವಾಗುತ್ತೆ ಎಂದು ಹೇಳಿದರು.
ಕದ್ದು ಮುಚ್ಚಿ ಗೆಳತಿ ಮನೆಗೆ ಹೋದ ಪತಿರಾಯ ಪತ್ನಿ ಕೈಗೆ ಸಿಕ್ಕಿ ಬಿದ್ದ: ಅಕ್ರಮ ಸಂಬಂಧ ಕಂಡು ಕೆಂಡಾಮಂಡಲವಾದ ಪತ್ನಿ
ಇನ್ನು ಮತಾಂತರ ನಿಷೇಧ ಕಾಯ್ದೆ ಬಗ್ಗೆ ಮಾತನಾಡಿದ ಅವರು, ಒತ್ತಾಯಪೂರ್ವಕ ಮತಾಂತರ ತಪ್ಪು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾನೂನು ತರುವ ಚರ್ಚೆ ನಡೆದಿದೆ ಹೊರತು ಅಂತಿಮವಾಗಿಲ್ಲ. ಆದರೆ ಆಗಲೇ ವಿರೋಧ ಮಾಡುತ್ತಿರುವುದು ಯಾಕೆ? ಎಂದು ಪ್ರಶ್ನಿಸಿದ್ದಾರೆ.