alex Certify BIG NEWS: ಬೋರ್ಡ್ ಎಕ್ಸಾಮ್ ಕುರಿತಂತೆ CBSE ಮಹತ್ವದ ಪ್ರಕಟಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬೋರ್ಡ್ ಎಕ್ಸಾಮ್ ಕುರಿತಂತೆ CBSE ಮಹತ್ವದ ಪ್ರಕಟಣೆ

ಕೊರೊನಾ ಕಾರಣದಿಂದಾಗಿ ಕಳೆದ 2 ವರ್ಷಗಳಿಂದ ಬೋರ್ಡ್​ ಪರೀಕ್ಷೆಯ ಅನಿಶ್ಚಿತತೆಯ ನಡುವೆಯೂ ಸಿ ಬೋರ್ಡ್​ ಎಕ್ಸಾಂ ಕುರಿತಂತೆ ಹೊಸ ನಿರ್ಧಾರವೊಂದನ್ನ ಕೈಗೊಂಡಿದೆ.

2021-22ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸಿಬಿಎಸ್​ಇ ವಿದ್ಯಾರ್ಥಿಗಳಿಗೆ 2 ಬೋರ್ಡ್ ಪರೀಕ್ಷೆಗಳನ್ನ ನಡೆಸಲಿದೆ. ಇದಕ್ಕೆ ಕ್ರಮವಾಗಿ ಟರ್ಮ್​ 1 ಹಾಗೂ ಟರ್ಮ್​ 2 ಪರೀಕ್ಷೆ ಎಂದು ಕರೆಯಲಾಗುತ್ತದೆ. ಪ್ರತಿ 50 ಪ್ರತಿಶತ ಪಠ್ಯಕ್ರಮಕ್ಕೆ ಒಂದರಂತೆ ಬೋರ್ಡ್​ ಎಕ್ಸಾಂ ನಡೆಯಲಿದೆ.

ಈ ಬೋರ್ಡ್​ ಪರೀಕ್ಷೆಗಳನ್ನ ಬರೆಯಲು ವಿದ್ಯಾರ್ಥಿಗಳಿಗೆ 90 ನಿಮಿಷ ಕಾಲಾವಕಾಶ ನೀಡಲಾಗುತ್ತದೆ. ಪ್ರಶ್ನೆ ಪತ್ರಿಕೆಗಳನ್ನ ಆಯಾ ಶಾಲೆಗಳಿಗೆ ಕಳುಹಿಸಿಕೊಡಲಾಗುತ್ತದೆ.

ಸಿಬಿಎಸ್​ಇ ನೇಮಕ ಮಾಡಿದ ಪ್ರಕಾರವೇ ಬಾಹ್ಯ ಕೇಂದ್ರ ಅಧೀಕ್ಷಕರು ಹಾಗೂ ಮೇಲ್ವಿಚಾರಕರು ಈ ಪರೀಕ್ಷೆಯ ನೇತೃತ್ವ ವಹಿಸಲಿದ್ದಾರೆ. ಟರ್ಮ್​ 1 ಹಾಗೂ ಟರ್ಮ್​ 2 ಒಟ್ಟೂ ಅಂಕಗಳನ್ನ ಪರಿಗಣಿಸಿ ವಿದ್ಯಾರ್ಥಿಗಳಿಗೆ ಒಟ್ಟಾರೆ ಅಂಕವನ್ನ ನೀಡಲಾಗುತ್ತದೆ. ಟರ್ಮ್​ 1 ಪರೀಕ್ಷೆಯು ನವೆಂಬರ್​ – ಡಿಸೆಂಬರ್​ ಹಾಗೂ ಟರ್ಮ್​ II ರ ಪರೀಕ್ಷೆಯು ಮಾರ್ಚ್​ – ಏಪ್ರಿಲ್​ ಅವಧಿಯಲ್ಲಿ ನಡೆಯಲಿದೆ ಎಂದು ಮಂಡಳಿ ಹೇಳಿದೆ.

ಹೊಸ ನಿಯಮಾವಳಿಗಳ ಪ್ರಕಾರ 2021-22ನೇ ಸಾಲಿನಲ್ಲಿ ಪಠ್ಯ ಕ್ರಮವನ್ನ 2 ಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತಿ ಭಾಗದಲ್ಲಿ 50 ಪ್ರತಿಶತ ಪಠ್ಯಕ್ರಮವು ಇರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...