ಕೊರೊನಾ ಕಾರಣದಿಂದಾಗಿ ಕಳೆದ 2 ವರ್ಷಗಳಿಂದ ಬೋರ್ಡ್ ಪರೀಕ್ಷೆಯ ಅನಿಶ್ಚಿತತೆಯ ನಡುವೆಯೂ ಸಿ ಬೋರ್ಡ್ ಎಕ್ಸಾಂ ಕುರಿತಂತೆ ಹೊಸ ನಿರ್ಧಾರವೊಂದನ್ನ ಕೈಗೊಂಡಿದೆ.
2021-22ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸಿಬಿಎಸ್ಇ ವಿದ್ಯಾರ್ಥಿಗಳಿಗೆ 2 ಬೋರ್ಡ್ ಪರೀಕ್ಷೆಗಳನ್ನ ನಡೆಸಲಿದೆ. ಇದಕ್ಕೆ ಕ್ರಮವಾಗಿ ಟರ್ಮ್ 1 ಹಾಗೂ ಟರ್ಮ್ 2 ಪರೀಕ್ಷೆ ಎಂದು ಕರೆಯಲಾಗುತ್ತದೆ. ಪ್ರತಿ 50 ಪ್ರತಿಶತ ಪಠ್ಯಕ್ರಮಕ್ಕೆ ಒಂದರಂತೆ ಬೋರ್ಡ್ ಎಕ್ಸಾಂ ನಡೆಯಲಿದೆ.
ಈ ಬೋರ್ಡ್ ಪರೀಕ್ಷೆಗಳನ್ನ ಬರೆಯಲು ವಿದ್ಯಾರ್ಥಿಗಳಿಗೆ 90 ನಿಮಿಷ ಕಾಲಾವಕಾಶ ನೀಡಲಾಗುತ್ತದೆ. ಪ್ರಶ್ನೆ ಪತ್ರಿಕೆಗಳನ್ನ ಆಯಾ ಶಾಲೆಗಳಿಗೆ ಕಳುಹಿಸಿಕೊಡಲಾಗುತ್ತದೆ.
ಸಿಬಿಎಸ್ಇ ನೇಮಕ ಮಾಡಿದ ಪ್ರಕಾರವೇ ಬಾಹ್ಯ ಕೇಂದ್ರ ಅಧೀಕ್ಷಕರು ಹಾಗೂ ಮೇಲ್ವಿಚಾರಕರು ಈ ಪರೀಕ್ಷೆಯ ನೇತೃತ್ವ ವಹಿಸಲಿದ್ದಾರೆ. ಟರ್ಮ್ 1 ಹಾಗೂ ಟರ್ಮ್ 2 ಒಟ್ಟೂ ಅಂಕಗಳನ್ನ ಪರಿಗಣಿಸಿ ವಿದ್ಯಾರ್ಥಿಗಳಿಗೆ ಒಟ್ಟಾರೆ ಅಂಕವನ್ನ ನೀಡಲಾಗುತ್ತದೆ. ಟರ್ಮ್ 1 ಪರೀಕ್ಷೆಯು ನವೆಂಬರ್ – ಡಿಸೆಂಬರ್ ಹಾಗೂ ಟರ್ಮ್ II ರ ಪರೀಕ್ಷೆಯು ಮಾರ್ಚ್ – ಏಪ್ರಿಲ್ ಅವಧಿಯಲ್ಲಿ ನಡೆಯಲಿದೆ ಎಂದು ಮಂಡಳಿ ಹೇಳಿದೆ.
ಹೊಸ ನಿಯಮಾವಳಿಗಳ ಪ್ರಕಾರ 2021-22ನೇ ಸಾಲಿನಲ್ಲಿ ಪಠ್ಯ ಕ್ರಮವನ್ನ 2 ಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತಿ ಭಾಗದಲ್ಲಿ 50 ಪ್ರತಿಶತ ಪಠ್ಯಕ್ರಮವು ಇರಲಿದೆ.