alex Certify BIG NEWS: ಬೆಂಗಳೂರಿನ ಕ್ಲಬ್ ಒಂದರಲ್ಲಿ ಸೃಜನ್ ಲೋಕೇಶ್ ಟೀಂ – ಸಚಿವ ಸೋಮಣ್ಣ ಪುತ್ರನ ಟೀಂ ನಡುವೆ ಮಾತಿನ ಚಕಮಕಿ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬೆಂಗಳೂರಿನ ಕ್ಲಬ್ ಒಂದರಲ್ಲಿ ಸೃಜನ್ ಲೋಕೇಶ್ ಟೀಂ – ಸಚಿವ ಸೋಮಣ್ಣ ಪುತ್ರನ ಟೀಂ ನಡುವೆ ಮಾತಿನ ಚಕಮಕಿ ?

ಬೆಂಗಳೂರಿನ ನಾಗರಬಾವಿಯಲ್ಲಿರುವ ಕಿಂಗ್ಸ್ ಕ್ಲಬ್ ನಲ್ಲಿ ನಟ ಸೃಜನ್ ಲೋಕೇಶ್ ತಂಡ ಹಾಗೂ ಸಚಿವ ವಿ. ಸೋಮಣ್ಣ ಅವರ ಪುತ್ರ ಅರುಣ್ ಸೋಮಣ್ಣ ತಂಡದ ನಡುವೆ ಮಾತಿನ ಚಕಮಕಿ ನಡೆದಿರುವುದಾಗಿ ಹೇಳಲಾಗಿದೆ.

ಪವರ್ ಸ್ಟಾರ್ ದಿ. ಪುನೀತ್ ರಾಜಕುಮಾರ್ ಸ್ಮರಣಾರ್ಥ ಬ್ಯಾಡ್ಮಿಂಟನ್ ಟೂರ್ನಿ ಆಯೋಜಿಸಲಾಗಿದ್ದು, ಪ್ರಾಕ್ಟೀಸ್ ಮುಗಿಸಿಕೊಂಡು ಬಂದ ಸೃಜನ್ ಲೋಕೇಶ್ ಮತ್ತು ಅವರ ತಂಡ ಕ್ಲಬ್ ನಲ್ಲಿ ಜೋರಾಗಿ ಮಾತನಾಡುತ್ತಿದ್ದರು ಎನ್ನಲಾಗಿದೆ.

ಈ ವೇಳೆ ಸಚಿವ ಸೋಮಣ್ಣ ಅವರ ಪುತ್ರ ಅರುಣ್ ಸೋಮಣ್ಣ ಮತ್ತು ಅವರ ಗೆಳೆಯರು ಎಂಟ್ರಿಯಾಗಿದ್ದು, ಕೂಗಾಟ ನಡೆಸಿರುವುದನ್ನು ಪ್ರಶ್ನಿಸಿದರು ಎನ್ನಲಾಗಿದೆ. ಈ ವೇಳೆ ಮಾತಿನ ಚಕಮಕಿ ವಿಕೋಪಕ್ಕೆ ತೆರಳಿ ಬಳಿಕ ಹೊಡೆದಾಟವಾಗಿದೆ ಎಂದು ಹೇಳಲಾಗಿದೆ.

ಗಲಾಟೆ ನಡೆದ ಸಂದರ್ಭದಲ್ಲಿ ಸೃಜನ್ ಲೋಕೇಶ್ ಸಹ ಸ್ಥಳದಲ್ಲಿ ಇದ್ದರು ಎನ್ನಲಾಗಿದ್ದು, ಆದರೆ ಗಲಾಟೆ ನಡೆದಿರುವ ಕುರಿತು ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಇನ್ನು ಘಟನೆಯನ್ನು ನಿರಾಕರಿಸಿರುವ ಕ್ಲಬ್ ಮಾಲೀಕರು ಪಾರ್ಕಿಂಗ್ ವಿಚಾರಕ್ಕೆ ವಾದ – ವಿವಾದ ನಡೆಯಿತು ಅದನ್ನು ಬಗೆಹರಿಸಿ ಕಳುಹಿಸಿದ್ದೇವೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...