ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ವಲಸಿಗ ಸಚಿವ ಎಂಟಿಬಿ ನಾಗರಾಜ್, ನಮಗೆ ಯಾವುದೇ ರೀತಿಯ ಆತಂಕಗಳಿಲ್ಲ, ಖುಷಿ ಖುಷಿಯಾಗಿದ್ದೇವೆ. ಉತ್ತಮ ಆಡಳಿತ ಕೊಡುವವರು ಸಿಎಂ ಆಗಬೇಕು ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಎಂಟಿಬಿ, ನಾವು ಯಡಿಯೂರಪ್ಪ ಒಬ್ಬರನ್ನೇ ನಂಬಿ ಬಿಜೆಪಿಗೆ ಬಂದಿಲ್ಲ. ಮೋದಿ ಆಡಳಿತ ಮೆಚ್ಚಿ ಬಂದಿದ್ದೇವೆ. ಮುಂದೆ ಯಾರೇ ಸಿಎಂ ಆದರೂ ನಮಗೆ ಯಾವುದೇ ಆತಂಕಗಳಿಲ್ಲ. ಸಂಪುಟದಲ್ಲಿ ಯಾರಿಗೆ ಸ್ಥಾನ ಕೊಡುತ್ತಾರೆ, ಯಾರನ್ನು ಕೈಬಿಡುತ್ತಾರೆ ಎಂಬುದು ಹೈಕಮಾಂಡ್ ಗೆ ಬಿಟ್ಟ ನಿರ್ಧಾರ. ನನಗೆ ಮಂತ್ರಿ ಸ್ಥಾನ ಇರಲಿ, ಇಲ್ಲದಿರಲಿ ಸಂತೋಷದಿಂದ ಇರುತ್ತೇನೆ ಎಂದರು.
ನೆಚ್ಚಿನ ಶ್ವಾನದ ಖುಷಿಗಾಗಿ ಜೋಕಾಲಿ ಆಡಿಸಿದ ಮಾಲೀಕ
ಯಡಿಯೂರಪ್ಪ 50 ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದವರು. ರಾಜಕೀಯ ಜೀವನದಲ್ಲಿ ಏಳುಬೀಳು ಸಹಜ. ಹೀಗಾಗಿ ರಾಜೀನಾಮೆ ವೇಳೆ ಭಾವುಕರಾಗಿದ್ದಾರೆ ಅಷ್ಟೇ ಎಂದು ಹೇಳಿದರು.