alex Certify BIG NEWS: ಬಿ.ಎಸ್.ವೈ. ಮೊಮ್ಮಗಳ ಆತ್ಮಹತ್ಯೆ ಪ್ರಕರಣ; ಪತಿ ನೀರಜ್ ಕೊಟ್ಟ ದೂರಿನ ಮೇರೆಗೆ ಕೇಸ್ ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಿ.ಎಸ್.ವೈ. ಮೊಮ್ಮಗಳ ಆತ್ಮಹತ್ಯೆ ಪ್ರಕರಣ; ಪತಿ ನೀರಜ್ ಕೊಟ್ಟ ದೂರಿನ ಮೇರೆಗೆ ಕೇಸ್ ದಾಖಲು

ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮೊಮ್ಮಗಳು ಡಾ. ಸೌಂದರ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಡಾ. ನೀರಜ್ ನೀಡಿದ ದೂರಿನ ಮೇರೆಗೆ ಯುಡಿಆರ್ ಕೇಸ್ ದಾಖಲಾಗಿದೆ.

ಡಾ. ಸೌಂದರ್ಯ (30) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ನೀರಜ್ ನೀಡಿದ ದೂರಿನನ್ವಯ ಹೈಗ್ರೌಂಡ್ ಠಾಣೆ ಪೊಲೀಸರು ಅಸಹಜ ಸಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ನೀರಜ್ ಮನೆಯಿಂದ ಡ್ಯೂಟಿಗೆ ತೆರಳಿದ್ದರು. ಮನೆ ಕೆಲಸದವರು ಬಂದು ಬಾಗಿಲು ಬಡಿದಾಗ ರೂಮ್ ಬಾಗಿಲು ತೆರೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೆಲಸದವರು ಮೇಡಮ್ ಬಾಗಿಲು ತೆರೆಯುತ್ತಿಲ್ಲ ಎಂದು ಡಾ. ನೀರಜ್ ಗೆ ಕರೆ ಮಾಡಿದ್ದಾರೆ.

10:30ರ ಸುಮಾರಿಗೆ ನೀರಜ್ ಮನೆಗೆ ಆಗಮಿಸಿದ್ದಾರೆ. ರೂಮಿನ ಬಾಗಿಲು ಮುರಿದು ನೋಡಿದಾಗ ಪತ್ನಿ ಡಾ. ಸೌಂದರ್ಯ ಆತ್ಮಹತ್ಯೆಗೆ ಶರಣಾಗಿದ್ದು ಬೆಳಕಿಗೆ ಬಂದಿದೆ. ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮೈಮೇಲೆ ಯಾವುದೇ ಗಾಯಗಳು ಪತ್ತೆಯಾಗಿಲ್ಲ.

ಈ ಹಿನ್ನೆಲೆಯಲ್ಲಿ ಪತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಅಸಹಜ ಸಾವು ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...