ಬೆಂಗಳೂರು: ರೌಡಿಶೀಟರ್ ಗಳ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಭಾಗಿಯಾದ ವಿಚಾರಕ್ಕೆ ಸಂಬಂಧಿಸಿದಂತೆ ಕಿಡಿಕಾರಿರುವ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ, ಬಿಜೆಪಿ ಒಂದು ವಾಷಿಂಗ್ ಮಷಿನ್ ಇದ್ದಂತೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಶಾಲು, ಕೇಸರಿ ಶಾಲು ಹಾಕಿದ್ರೆ ಎಲ್ಲಾ ಪಾಪ ಕ್ಲೀನ್ ಆಗುತ್ತದೆ. ಬಿಜೆಪಿ ಸೇರಿದರೆ ಪಾಪಿಗಳೆಲ್ಲ ಪಾವನರಾಗ್ತಾರೆ. ಖಾಲಿ ಕುರ್ಚಿಗಳ ಸ್ಪಂದನ ಆಗ್ತಿರೋದಕ್ಕೆ ಮಸಲ್ ಪವರ್ ಬಳಸ್ತಿದ್ದಾರೆ. ಬಿಜೆಪಿ ಮನಿ ಹಾಗೂ ಮಸಲ್ ಪವರ್ ಬಳಸುತ್ತಿದೆ ಎಂಬುದು ಇದರಿಂದ ಸ್ಪಷ್ಟ ಎಂದು ಹೇಳಿದರು.
ಸಿಸಿಬಿ ಪೊಲೀಸರಿಗೆ ಯಾಕೆ ರೌಡಿಶೀಟರ್ ಸೈಲೆಂಟ್ ಸುನೀಲ್ ಸಿಗ್ತಿಲ್ಲ ? ಸುನೀಲ್ ಎಲ್ಲಿ ಎಂದು ತೇಜಸ್ವಿ ಸೂರ್ಯನನ್ನು ಕೇಳಿದರೆ ಗೊತ್ತಾಗುತ್ತದೆ. ಮೋಸ್ಟ್ ವಾಂಟೆಡ್ ಇರುವವರು ಸಿಸಿಬಿ ಕೈಗೆ ಸಿಗುತ್ತಿಲ್ಲ ಅಂದ್ರೆ ಹೋಮ್ ಮಿನಿಸ್ಟರ್ ಗೂ ಇವರಿಗೂ ಹೊಂದಾಣಿಕೆ ಇದೆಯೇ ? ಬಿಜೆಪಿ ಸಂಸದರ ಜೊತೆ ಇರುವ ರೌಡಿಶೀಟರ್ ಗಳು ಸಿಸಿಬಿ ಕೈಗೆ ಸಿಗ್ತಿಲ್ವಾ? ಪುಡಿರೌಡಿಗಳನ್ನು ಇಟ್ಟುಕೊಂಡು ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.