ಕೊಪ್ಪಳ: ಮುಂಬರುವ ವಿಧಾನಸಭಾ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳ ಲಾಭಿ ಆರಂಭವಾಗಿದ್ದು, ಕೊಪ್ಪಳ ಬಿಜೆಪಿ ಶಾಸಕ ಬಸವರಾಜ್ ದಡೆಸಗೂರ ಅವರಿಗೆ ಟಿಕೆಟ್ ನೀಡದಂತೆ ಒತ್ತಾಯಗಳು ಕೇಳಿಬಂದಿವೆ.
ಕನಕಗಿರಿ ಬಿಜೆಪಿ ಶಾಸಕ ದಡೆಸಗೂರ ವಿರುದ್ಧ ಪಿ ಎಸ್ ಐ ನೇಮಕಾತಿ ಹಗರಣದಲ್ಲಿ ಆಡಿಯೋ ವೈರಲ್, ಹಣಕ್ಕೆ ಬೇಡಿಕೆ ಸೇರಿದಂತೆ ಹಲವು ಆರೋಪಗಳು ಇದ್ದು ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಶಾಸಕರ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದಾರೆ. ಇದೇ ವೇಳೆ ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಸಭೆ ಸೇರಿರುವ ಬಿಜೆಪಿ ಮುಖಂಡರು ದಡೆಸಗೂರ ಅವರಿಗೆ ಟಿಕೆಟ್ ಕೊಡದಂತೆ ಒತ್ತಡ ಹೇರಬೇಕು ಎಂದು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಶಾಸಕರ ದುರ್ವರ್ತನೆ, ಪಿ ಎಸ್ ಐ ಹಗರಣದ ಆಡೀಯೋ ಪ್ರಕರಣ, ಮಹಿಳಾ ಅಧಿಕಾರಿ ಜೊತೆ ಗಲಾಟೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದ್ದು, ಶಾಸಕರ ಈ ನಡೆ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟುಮಾಡಿದೆ. ಹೀಗಾಗಿ ದಡೆಸಗೂರುಗೆ ಟಿಕೆಟ್ ನೀಡದೇ ಹೊಸಬರನ್ನು ಕಣಕ್ಕಿಳಿಸುವಂತೆ ಒತ್ತಾಯಿಸಲು ಬಿಜೆಪಿ ಮುಖಂಡರು ಸಭೆಯಲ್ಲಿ ತೀರ್ಮಾನಿಸಿದ್ದಾರೆ.