alex Certify BIG NEWS: ಬಿಜೆಪಿ ನಾಯಕರ ಹೆಸರಲ್ಲೂ ಹುಕ್ಕಾ ಬಾರ್ ತೆರೆಯಬಹುದಲ್ಲ….?; ಸಿ.ಟಿ. ರವಿಗೆ ತಿರುಗೇಟು ಕೊಟ್ಟ ಸಿದ್ದರಾಮಯ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಿಜೆಪಿ ನಾಯಕರ ಹೆಸರಲ್ಲೂ ಹುಕ್ಕಾ ಬಾರ್ ತೆರೆಯಬಹುದಲ್ಲ….?; ಸಿ.ಟಿ. ರವಿಗೆ ತಿರುಗೇಟು ಕೊಟ್ಟ ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್ ನಾಯಕರು ನೆಹರು ಹೆಸರಲ್ಲಿ ಹುಕ್ಕಾ ಬಾರ್ ತೆರೆಯಲಿ ಎಂಬ ಸಿ.ಟಿ.ರವಿ ಹೇಳಿಕೆಗೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ನಾಯಕರ ಹೆಸರಲ್ಲಿಯೇ ಹುಕ್ಕಾ ಬಾರ್ ತೆರೆಯಬಹುದಿತ್ತಲ್ಲ, ಹಾಗ್ಯಾಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಗುಜರಾತ್ ಅಹಮದಾಬಾದ್ ನಲ್ಲಿ ಕ್ರೀಡಾಂಗಣಕ್ಕೆ ಮೋದಿ ಹೆಸರಿಟ್ಟಿದ್ದಾರೆ. ದೆಹಲಿಯಲ್ಲಿ ಜೇಟ್ಲಿ ಹೆಸರಿಟ್ಟಿದ್ದಾರೆ. ಬೆಂಗಳೂರಿನ ಯಶವಂತಪುರದಲ್ಲಿ ದೀನ್ ದಯಾಳ್ ಹೆಸರು, ಯಲಹಂಕದಲ್ಲಿ ಸೇತುವೆಗೆ ಸಾವರ್ಕರ್ ಹೆಸರಿಟ್ಟಿದ್ದಾರೆ. ಇದನ್ನೆಲ್ಲ ಹುಕ್ಕಾ ಬಾರ್ ಎಂದು ಕರೆಯಲು ಆಗುತ್ತಾ? ಇದಕ್ಕೆಲ್ಲ ಬಿಜೆಪಿ ನಾಯಕರ ಹೆಸರಿಟ್ಟಿದ್ದಕ್ಕೆ ನಾವು ಎಂದಾದರೂ ಪ್ರಶ್ನೆ ಮಾಡಿದ್ದೇವಾ? ಹೆಸರು ಬದಲಿಸುವಂತೆ ಹೇಳಿದ್ದೇವಾ? ಸಿ.ಟಿ.ರವಿ ಲಘುವಾಗಿ ಮಾತನಾಡುವುದನ್ನು ಬಿಡಬೇಕು ಎಂದರು.

14ನೇ ವಯಸ್ಸಿನಲ್ಲೇ ಗರ್ಭಧರಿಸಿ 11 ಮಕ್ಕಳನ್ನು ಪಡೆದ ತಾಯಿಗೆ ಬೇಕಂತೆ ಇನ್ನೂ 6 ಮಕ್ಕಳು..!

ನಾವು ವಾಜಪೇಯಿ, ಅಡ್ವಾಣಿ ಬಗ್ಗೆ ಮಾತನಾಡಲು ಹೋಗಲ್ಲ. ಬಿಜೆಪಿ ನಾಯಕರ ಬಗ್ಗೆಯೂ ಮಾತನಾಡಿಲ್ಲ, ಸಿಟಿ ರವಿಗೆ ಇತಿಹಾಸವೂ ಗೊತ್ತಿಲ್ಲ, ಗೌರವ ಕೊಡುವುದೂ ಗೊತ್ತಿಲ್ಲ. ಸಂವಿಧಾನ ಬದಲಾವಣೆ ಮಾಡಬೇಕು ಎಂದು ಹೇಳುವವರಿಗೆ ಇನ್ನು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಗೊತ್ತಾಗುತ್ತಾ? ಸಿ.ಟಿ.ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿಯಾಗಿದ್ದಾರೆ. ಉನ್ನತ ಹುದ್ದೆಯಲ್ಲಿದ್ದವರು ಹೇಗೆ ಮಾತನಾಡಬೇಕು ಎಂದು ತಿಳಿದುಕೊಳ್ಳಲಿ ಎಂದು ಕಿಡಿಕಾರಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...