ಬೆಂಗಳೂರು: ಭಾರತದಲ್ಲಿ ಸರಿಸುಮಾರು 19,500 ಮಾತೃಭಾಷೆಗಳಿವೆ. ಭಾರತದೆಡೆಗಿನ ಪ್ರೀತಿ ಪ್ರತಿಯೊಂದು ಭಾಷೆಯಲ್ಲಿಯೂ ಏಕರೀತಿಯಲ್ಲಿ ವ್ಯಕ್ತವಾಗುತ್ತದೆ. ಯಾವುದೇ ಭಾಷೆಯು ಮತ್ತೊಂದರ ಮೇಲೆ ಪ್ರಾಬಲ್ಯ ಸಾಧಿಸದಂತೆ ಭಾಷಾವಾರು ಪ್ರಾಂತ್ಯ ರಚಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕಾಂಗ್ರೆಸ್ ಭಾಷಾವಾರು ಪ್ರಾಂತ್ಯಗಳನ್ನು ರಚಿಸಿರುವುದನ್ನು ಹೆಮ್ಮೆಯ ಕನ್ನಡಿಗನಾಗಿ ಮತ್ತು ಕಾಂಗ್ರೆಸ್ಸಿಗನಾಗಿ ನೆನಪಿಸಬಯಸುತ್ತೇನೆ. ದೇಶದಲ್ಲಿ ಹಲವಾರು ಭಾಷೆಗಳಿವೆ. ಕನ್ನಡ, ತೆಲುಗು, ಮಲಯಾಳಂ, ಹಿಂದಿ ಹೀಗೆ. ಆಯಾ ಪ್ರಾಂತ್ಯಗಳಲ್ಲಿ ಆಯಾ ಭಾಷೆಗೆ ಆದ್ಯತೆ. ಎಲ್ಲಾ ಭಾಷೆಗಳಿಗೂ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಹಾಗಾಗಿ ನಾನು ಯಾರೊಬ್ಬರ ಹೇಳಿಕೆಗೂ ಪ್ರತಿಕ್ರಿಯೆ ನೀಡಲ್ಲ ಎಂದರು.
WATCH: ರೋಚಕ ಐಪಿಎಲ್ ಪಂದ್ಯದ ವೇಳೆ ಸಿಟ್ಟಿಗೆದ್ದ ಮುತ್ತಯ್ಯ ಮುರಳೀಧರನ್ ಬಾಯಲ್ಲಿ ಅಶ್ಲೀಲ ಬೈಗುಳ
ನಮ್ಮ ಭಾಷೆ, ನಮ್ಮ ಜನರ ರಕ್ಷಣೆ ಮಾಡಬೇಕಾಗಿದ್ದು ನಮ್ಮ ಕೆಲಸ. ಯಾವ ಟ್ವೀಟ್, ಯಾರ ರಿಫ್ಲೈಗೂ ನಾನು ಪ್ರತಿಕ್ರಿಯೆ ನೀಡಲ್ಲ. 500 ರೂಪಾಯಿ ನೋಟಿನ ಮೇಲೆ ಹಲವು ಭಾಷೆಗಳ ಲಿಸ್ಟ್ ಇದೆ. ಎಲ್ಲಾ ಭಾಷೆಗಳಿಗೂ ದೇಶದಲ್ಲಿ ಮಹತ್ವವಿದೆ ಎಂಬುದನ್ನು ಇದೆ ಹೇಳುತ್ತದೆ ಎಂದು ತಿಳಿಸಿದರು.