ಕ್ಯಾಲಿಫೋರ್ನಿಯಾದ ಸರಿ ಸುಮಾರು ಮೂರು ಡಜನ್ಗೂ ಅಧಿಕ ಮಹಿಳೆಯರು ವಯಸ್ಕರ ವಿಡಿಯೋ ವೆಬ್ಸೈಟ್ ಪೋರ್ನ್ ಹಬ್ ವಿರುದ್ಧ ದೂರನ್ನ ದಾಖಲು ಮಾಡಿದ್ದಾರೆ. ಇದರ ಮೂಲ ಕಂಪನಿಯು ಮಕ್ಕಳನ್ನೂ ಸೇರಿದಂತೆ ಅನೇಕರ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯದ ವಿಡಿಯೋಗಳಿಂದ ಲಾಭ ಗಳಿಸುತ್ತಿದೆ ಎಂದು ಆರೋಪಿಸಿದ್ದಾರೆ.
ವಿಶ್ವದ ಅತಿದೊಡ್ಡ ವಯಸ್ಕ ವಿಡಿಯೋ ವೆಬ್ಸೈಟ್ಗಳಲ್ಲಿ ಒಂದಾದ ಈ ಫೋರ್ನ್ಹಬ್, ಮಕ್ಕಳ ಅಶ್ಲೀಲ ವಿಡಿಯೋಗಳಿಗೆ ಮಾರುಕಟ್ಟೆಯನ್ನೇ ಸೃಷ್ಟಿ ಮಾಡುತ್ತಿದೆ. ಅಲ್ಲದೇ ಸಮಾಜದ ಸ್ವಾಸ್ಥ್ಯವನ್ನ ಹಾಳು ಮಾಡುವಂತಹ ಲೈಂಗಿಕ ವಿಡಿಯೋಗಳನ್ನ ಶೇರ್ ಮಾಡಿದೆ. ಇದರಿಂದ ಉಂಟಾದ ಹಾನಿಯನ್ನ ಕಂಪನಿಯೇ ಭರಿಸಬೇಕು ಎಂದು ದೂರದಾರರ ಪರ ವಕೀಲ ವಾದಿಸಿದ್ದಾರೆ.
ಕ್ಯಾಲಿಫೋರ್ನಿಯಾ ಯುಎಸ್ ಡಿಸ್ಟ್ರಿಕ್ಟ್ ಕೋರ್ಟ್ ಸೆಂಟರ್ಲ್ ಡಿಸ್ಟ್ರಿಕ್ಟ್ನಲ್ಲಿ ಗುರುವಾರ ಕೇಸ್ನ್ನು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ದೂರುದಾರರಿಗೆ ಉಂಟಾದ ಹಾನಿಗೆ ಮೈಂಡ್ಗ್ರೀಕ್ ಕಂಪನಿಯೇ ಹೊಣೆದಾರ ಆಗಬೇಕು ಎಂದು ಉಲ್ಲೇಖಿಸಲಾಗಿದೆ.
ಮಹಿಳೆಯರ ಪರ ವಕೀಲರಾದ ಮೈಕೆಲ್ ಬೋವ್, ಮೈಂಡ್ಗೀಕ್ ಕಂಪನಿಯು ನಷ್ಟದ ರೂಪವಾಗಿ ಮಹಿಳೆಯರಿಗೆ ನೂರಾರು ಮಿಲಿಯನ್ ಪಾವತಿ ಮಾಡಲು ಕೋರ್ಟ್ ಆದೇಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಈ ವಿಡಿಯೋ ಪೋಸ್ಟ್ ಮಾಡಿ ವಾರಗಳೇ ಕಳೆದಿದ್ದರೂ ಸಹ ವಿಡಿಯೋವನ್ನ ಮೈಂಡ್ಗೀಕ್ ಕಂಪನಿ ಅಳಿಸಿ ಹಾಕಿರಲಿಲ್ಲ. ಈ ಸಮಯದಲ್ಲಿ ಅನೇಕರು ಇಂತಹ ಸಮಾಜಘಾತುಕ ವಿಡಿಯೋಗಳನ್ನ ಡೌನ್ಲೋಡ್ ಮಾಡಿದ್ದಾರೆ.
ಫೋರ್ನ್ ಹಬ್ ವಿರುದ್ಧ ಆರೋಪ ಮಾಡಿರುವ ಸೆರೆನಾ ಪ್ಲಾಯಿಟಿಸ್ ಎಂಬವರು 2014ರಲ್ಲಿ ಈ ಫೋರ್ನ್ ಹಬ್ನಲ್ಲಿ ತಮ್ಮ ಅನುಮತಿಯಿಲ್ಲದೇ ತಾವು ಬಾಯ್ಫ್ರೆಂಡ್ ಜೊತೆ ಬೆತ್ತಲೆಯಾಗಿದ್ದ ವಿಡಿಯೋವನ್ನ ಹರಿಬಿಡಲಾಗಿತ್ತು ಎಂದು ಆರೋಪಿಸಿದ್ದಾರೆ. ಈ ರೀತಿಯ ವಿಡಿಯೋವನ್ನ ಹರಿಬಿಟ್ಟ ಸಮಯದಲ್ಲಿ ಸೆರೆನಾರ ವಯಸ್ಸು ಕೇವಲ 13 ವರ್ಷ ಆಗಿತ್ತು. ಸೆರೆನಾ ಈ ಬಗ್ಗೆ ಆರೋಪ ಮಾಡಿದ ಹಲವು ವಾರಗಳ ಬಳಿಕ ಫೋರ್ನ್ ಹಬ್ ವಿಡಿಯೋ ಡಿಲೀಟ್ ಮಾಡಿತ್ತು ಎಂದು ಹೇಳಿದ್ದಾರೆ.
ಇನ್ನು ಫೋರ್ನ್ ಹಬ್ ವಿರುದ್ಧ ಆರೋಪ ಮಾಡಿರುವ ಇನ್ನೊಬ್ಬ ದೂರುದಾರ ಮಹಿಳೆ, ವಿಶ್ವದ ಅತಿದೊಡ್ಡ ವಯಸ್ಕ ವಿಡಿಯೋ ವೆಬ್ಸೈಟ್ ಆಗಿರುವ ಫೋರ್ನ್ ಹಬ್ ಮಕ್ಕಳ ಅಶ್ಲೀಲ ವಿಡಿಯೋ ಪೋಸ್ಟ್ ಮಾಡೋದು ಹಾಗೂ ಅನುಮತಿಯನ್ನ ಪಡೆಯದೇ ವ್ಯಕ್ತಿಗಳ ಖಾಸಗಿ ಕ್ಷಣಗಳ ವಿಡಿಯೋವನ್ನ ಶೇರ್ ಮಾಡುತ್ತಿದೆ ಎಂದು ಹೇಳಿದ್ದಾರೆ. ಹೀಗಾಗಿ ಮೈಂಡ್ಗೀಕ್ ಕಂಪನಿಯು ಈ ನಷ್ಟವನ್ನ ಭರಿಸಿಕೊಡಬೇಕು. ವೈಯಕ್ತಿಕ ಮನರಂಜನೆಯ ಹೆಸರಿನಲ್ಲಿ ಫೋರ್ನ್ಹಬ್ ಅಪರಾಧ ಕೃತ್ಯ ಎಸಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.