alex Certify BIG NEWS: ಪುರಾವೆಗಳೇ ಇಲ್ಲದ ಪತ್ರ; ಸರ್ಕಾರ ವಜಾಗೆ ಕಾಂಗ್ರೆಸ್ ಆಗ್ರಹ; ಖಡಕ್ ತಿರುಗೇಟು ನೀಡಿದ BJP | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪುರಾವೆಗಳೇ ಇಲ್ಲದ ಪತ್ರ; ಸರ್ಕಾರ ವಜಾಗೆ ಕಾಂಗ್ರೆಸ್ ಆಗ್ರಹ; ಖಡಕ್ ತಿರುಗೇಟು ನೀಡಿದ BJP

ಬೆಂಗಳೂರು: ಕಾಂಗ್ರೆಸ್ ನಾಯಕರೇ ಶಾಸಕ ಗೋವಿಂದರಾಜು ಅವರ ಡೈರಿ ಪ್ರಕರಣವನ್ನು ಒಮ್ಮೆ ನೆನಪಿಸಿಕೊಳ್ಳಿ ಎಂದು ರಾಜ್ಯ ಬಿಜೆಪಿ ಕೈ ನಾಯಕರಿಗೆ ಚಾಟಿ ಬೀಸಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಮಯವದು. ಸಿದ್ದರಾಮಯ್ಯ ಬೆಂಬಲಿಗರು ನೈತಿಕತೆಯ ಹುಸಿ ಪಾಠ ಮಾಡುತ್ತ ಖಜಾನೆಯನ್ನು ಖಾಲಿ ಮಾಡುತ್ತಿದ್ದ ಭ್ರಷ್ಟಾಚಾರದ ಉಚ್ಛ್ರಾಯ ಕಾಲ. ಆಗ ಬಹಿರಂಗಗೊಂಡಿದ್ದ ಕಾಂಗ್ರೆಸ್ ಎಂಎಲ್ಸಿ ಗೋವಿಂದರಾಜು ಅವರ ಡೈರಿಯಲ್ಲಿ ಐಟಿ ದಾಳಿಯಲ್ಲಿ ಸಿದ್ದರಾಮಯ್ಯನವರ ಪರವಾಗಿ ಗೋವಿಂದರಾಜು ಕಾಂಗ್ರೆಸ್ ಹೈಕಮಾಂಡ್ ಗೆ ಸಲ್ಲಿಸಿದ ಕಪ್ಪ ಕಾಣಿಕೆಯ ವಿವರವಿತ್ತು ಎಂದು ಸರಣಿ ಟ್ವೀಟ್ ಮೂಲಕ ತಿಳಿಸಿದೆ.

ಕಾಂಗ್ರೆಸ್ ಹೈಕಮಾಂಡ್, ಎಪಿ, ಆರ್ ಜಿ, ಎಸ್ ಜಿ ಮೊದಲಾದ ಸಂಕೇತಾಕ್ಷರಗಳಿದ್ದವು. ಸಿದ್ದರಾಮಯ್ಯನವರೇ ಇವು ಯಾರ ಹೆಸರನ್ನು ಸೂಚಿಸುತ್ತಿದ್ದವು ಎಂಬುದನ್ನು ಸ್ವಲ್ಪ ವಿವರಿಸಿ.

ಮುಂಬೈ ಭಯೋತ್ಪಾದಕ ದಾಳಿಗೆ 13 ವರ್ಷ….! ಇನ್ನೂ ಮಾಸಿಲ್ಲ ಭಯಾನಕ ದಾಳಿಯ ಆ ಕರಾಳ ನೆನಪು

ಡಿಕೆಶಿ ಮನೆ ಮೇಲೆ ದಾಳಿ ನಡೆದಾಗ ಅವರೊಂದಿಷ್ಟು ಕಾಗದಗಳನ್ನು ಹರಿದು ಹಾಕಿದ್ದರು. ಹಠ ಬಿಡದ ಐಟಿ ಅಧಿಕಾರಿಗಳು ಆ ಚೀಟಿಗಳನ್ನು ಜೋಡಿಸಿದಾಗಲೂ ಎಐಸಿಸಿ, ಎಪಿ, ಆರ್ ಜಿ, ಎಸ್ ಜಿ ಎಂಬ ಉಲ್ಲೇಖಗಳಿತ್ತು. ಕಾಂಗ್ರೆಸ್ ನಾಯಕರ ಮೇಲೆ ಐಟಿ ದಾಳಿ ನಡೆದಾಗಲೆಲ್ಲ ಇದೇ ಕೆಲವು ರಹಸ್ಯಾಕ್ಷರಗಳು ಹೊರಬರುತ್ತವೆ. ಯಾರಿವರು ಎಂದು ಪ್ರಶ್ನಿಸಿದ್ದಾರೆ.

ಪುರಾವೆಗಳೇ ಇಲ್ಲದ ಪತ್ರವನ್ನಿಟ್ಟುಕೊಂಡು ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ಕಾಂಗ್ರೆಸ್ ರಾಜ್ಯಪಾಲರನ್ನು ಆಗ್ರಹಿಸಿದೆ. ಆಧಾರ ರಹಿತ ಪತ್ರದ ಆಧಾರದಲ್ಲಿ ಸರ್ಕಾರ ವಜಾಗೊಳಿಸಲು ಒತ್ತಾಯಿಸುವುದಾದರೆ ಐಟಿ ದಾಳಿಯಲ್ಲಿ ಲಭಿಸಿದ ಅಧಿಕೃತ ದಾಖಲೆಗಳ ಪ್ರಕಾರ ಕಾಂಗ್ರೆಸ್ ಸರ್ಕಾರವನ್ನು ಅಂದು ವಜಾಗೊಳಿಸಬೇಕಿತ್ತಲ್ಲವೇ? ಎಂದು ಕೇಳಿದೆ.

ನನ್ನ ಆತ್ಮಹತ್ಯೆಗೆ ಕೆ.ಜೆ.ಜಾರ್ಜ್ ಕಾರಣ ಎಂದು ಡಿವೈ ಎಸ್ ಪಿ ಗಣಪತಿ ನೇರ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡರು. ಆದರೆ ಕಾಂಗ್ರೆಸ್ ಅವರಿಗೆ ಮಾನಸಿಕ ರೋಗಿ ಎಂಬ ಪಟ್ಟಕಟ್ಟಿತು. ಕಾಂಗ್ರೆಸ್ಸಿಗರೇ, ನಿಮ್ಮ ಅಧಿಕಾರಾವಧಿಯಲ್ಲಿ ಸರ್ಕಾರವನ್ನು ವಜಾಮಾಡಲು ಸಾಕಷ್ಟು ಕಾರಣಗಳಿದ್ದವು ನೆನಪಿಸಿಕೊಳ್ಳುವಿರಾ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...