alex Certify BIG NEWS: ಪೀಠದಲ್ಲಿ ಕುಳಿತು ಹೀಗೆ ಹೇಳಲು ನಾಚಿಕೆಯಾಗಬೇಕು; H.D ಕುಮಾರಸ್ವಾಮಿ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪೀಠದಲ್ಲಿ ಕುಳಿತು ಹೀಗೆ ಹೇಳಲು ನಾಚಿಕೆಯಾಗಬೇಕು; H.D ಕುಮಾರಸ್ವಾಮಿ ಆಕ್ರೋಶ

ಬೆಂಗಳೂರು: ರಾಜ್ಯದಲ್ಲಿ ಆರಂಭವಾಗಿರುವ ಹಲಾಲ್ ನಿಷೇಧ ಅಭಿಯಾನ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಹಿಂದೂ ಧರ್ಮ ’ಸರ್ವೇ ಜನಾಃ ಸುಖಿನೋ ಭವಂತು” ಎಂದು ಹೇಳುತ್ತೆ. ಸ್ವಾಮೀಜಿಗಳು ಧರ್ಮ ಪ್ರಚಾರ ಮಾಡಬೇಕು ಅದನ್ನು ಮಾಡಲಿ. ನಮ್ಮ ಮನೆಗೂ ಅರ್ಚಕರು ಭೇಟಿ ಕೊಟ್ಟಿದ್ದರು. ಧರ್ಮ ಪ್ರಚಾರ ನೀವು ಮಾಡಿ ಎಂದು ಹೇಳಿದ್ದೇನೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಲಾಲ್ ನಿಷೇಧ ಅಭಿಯಾನ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಹಲಾಲ್ ವಿಚಾರ ವಿಧಾನಸಭೆಯಲ್ಲಿ ಚರ್ಚೆಗೆ ಬಂದಿಲ್ಲ. ಬಂದರೆ ಚರ್ಚೆ ಮಾಡಬಹುದು. ಸಮಾಜದಲ್ಲಿ ಅಶಾಂತಿಗೆ ಕಾರಣ ವಿಚಾರವನ್ನು ಚರ್ಚಿಸಿದರೆ ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ನನ್ನಿಂದಾದ ಸಲಹೆ ನೀಡುತ್ತೇನೆ ಎಂದರು.

BIG NEWS: ಹಲಾಲ್ ವಿವಾದ; ಸಿಎಂ ಬೊಮ್ಮಾಯಿ ನೀಡಿದ ಪ್ರತಿಕ್ರಿಯೆಯೇನು…?

ರಾಜ್ಯದಲ್ಲಿ ಹಲಾಲ್ ಮಾಂಸ ನಿಷೇಧ, ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಇಂತಹ ವಿಚಾರ ಸಮಾಜದಲ್ಲಿ ಸಾಮರಸ್ಯ ಒಡೆಯಲು ಕಾರಣವಾಗುತ್ತದೆ. ಅನಗತ್ಯವಾಗಿ ವಿವಾದ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ ಇದು ಸರಿಯಲ್ಲ ಎಂದು ಹೇಳಿದರು.

ಕೋಲಾರದ ಶಿವಾರ ಪಟ್ಟಣದಲ್ಲಿ 30 ವರ್ಷಗಳಿಂದ ಮುಸ್ಲಿಂ ಕುಟುಂಬವೆ ಮೂರ್ತಿ ಕೆತ್ತನೆ ಮಾಡುತ್ತಿದೆ. 15 ಕುಟುಂಬಗಳು ಕಳೆದ 30 ವರ್ಷಗಳಿಂದ ಈ ಸೇವೆ ಮಾಡುತ್ತಿದ್ದಾರೆ. ಇವರನ್ನು ಯಾವಾಗ ಬಹಿಷ್ಕಾರ ಮಾಡ್ತೀರಾ? ಎಂದು ಪ್ರಶ್ನಿಸಿದರು. ರಾಜ್ಯದಲ್ಲಿನ ಬೆಳವಣಿಗೆಗಳು ಸರಿಯಲ್ಲ ಎಂದರು.

ಇದೇ ವೇಳೆ ವಿಧಾನಸಭೆಯಲ್ಲಿ ಸ್ಪೀಕರ್ ಕಾಗೇರಿ ನೀಡಿರುವ ಹೇಳಿಕೆ ಕುರಿತು ಕಿಡಿಕಾರಿದ ಕುಮಾರಸ್ವಾಮಿ, ನಮ್ಮ ಸ್ಪೀಕರ್ ಸದನದ ಪೀಠದಲ್ಲಿ ಕುಳಿತು ನಾವು ಆರ್.ಎಸ್.ಎಸ್ ಒಪ್ಪುತ್ತೇವೆ. ನಮ್ಮ ಆರ್.ಎಸ್.ಎಸ್ ಎಂದು ಹೇಳಿಕೆ ನೀಡಿದರು. ಸಭಾಧ್ಯಕ್ಷರಾಗಿ, ಪೀಠದಲ್ಲಿ ಕುಳಿತು ಹೀಗೆ ಹೇಳಲು ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...