ಬೆಂಗಳೂರು: ನಮ್ಮ ಸಿದ್ಧಾಂತ, ನಾಯಕತ್ವದ ಮೇಲೆ ನಂಬಿಕೆಯಿದ್ದ ಯಾರೇ ಆದರೂ ಪಕ್ಷಕ್ಕೆ ಬರಬಹುದು ಎಂದು ಹೇಳಿಕೆ ನೀಡುವ ಮೂಲಕ ಸಿಎಲ್ಪಿ ನಾಯಕ ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟಾಂಗ್ ನೀಡಿದ್ದಾರೆ.
ಇನ್ನು ಸರಿಮಾಡಲು ಸಾಧ್ಯವೇ ಇಲ್ಲ ಎಂಬ ವಸ್ತುವಿಗೂ ಜೀವ ತುಂಬುತ್ತೆ ಈ ರಿಪೇರಿ ಕೆಫೆ..!
ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಗೆ ದ್ರೋಹ ಮಾಡಿ ಬೇರೆ ಪಕ್ಷಕ್ಕೆ ಸೇರ್ಪಡೆಯಾದವರು ಮರಳಿ ಬಂದರೆ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದರು. ಪಕ್ಷದ ಸಿದ್ಧಾಂತ ಒಪ್ಪಿ ಬಂದವರಿಗೆ ಮತ್ತೆ ಪಕ್ಷಕ್ಕೆ ಸೇರಲು ಅವಕಾಶವಿದೆ ಎಂದರು.
SHOCKING NEWS: ಕರುಳನ್ನೇ ಹಿಂಡುವ ಘೋರ ಕೃತ್ಯ; ನವಜಾತ ಹೆಣ್ಣು ಶಿಶುವನ್ನು ನೇಣು ಬಿಗಿದು ಹತ್ಯೆ ಮಾಡಿದ ಹೆತ್ತಮ್ಮ….!
ಕೇವಲ 17 ಜನರಷ್ಟೇ ಅಲ್ಲ ಯಾರು ಬೇಕಾದರೂ ಬರಲಿ. ನಾಯಕತ್ವದ ಮೇಲೆ ನಂಬಿಕೆಯಿದ್ದರೆ, ಸಿದ್ಧಾಂತ ಒಪ್ಪಿ ಬರಲಿ. ಮೊದಲು ಪಕ್ಷಕ್ಕೆ ಬರುವ ಬಗ್ಗೆ ಅರ್ಜಿ ಹಾಕಲಿ ನಂತರ ಪರಿಶೀಲಿಸಿ ನಿರ್ಧರಿಸುತ್ತೇವೆ ಎಂದು ಹೇಳಿದರು.
ಖಾಸಗಿ ಸುದ್ದಿ ವಾಹಿನಿಗೆ ನಿನ್ನೆ ನೀಡಿದ್ದ ಸಂದರ್ಶನದಲ್ಲಿ ಕೂಡ ಡಿ.ಕೆ. ಶಿವಕುಮಾರ್, ಬಾಂಬೆ ಫ್ರೆಂಡ್ಸ್ ಟೀಂ ಗೆ ಪರೋಕ್ಷ ಸಂದೇಶ ರವಾನಿಸಿದ್ದರು. ರಾಜಕೀಯದಲ್ಲಿ ಒಂದೇ ನಿಲುವು ಸಾಧ್ಯವಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ಬದಲಿಸಬೇಕಾಗುತ್ತೆ ಎಂದು ಹೇಳಿಕೆ ನೀಡಿದ್ದರು.