alex Certify BIG NEWS: ನ್ಯೂಸ್ ಚಾನಲ್ ವರದಿಗಾರರ ಹೆಸರಲ್ಲಿ ಸುಲಿಗೆ; ನಾಲ್ವರು ಅರೆಸ್ಟ್; ಓರ್ವ ಎಸ್ಕೇಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನ್ಯೂಸ್ ಚಾನಲ್ ವರದಿಗಾರರ ಹೆಸರಲ್ಲಿ ಸುಲಿಗೆ; ನಾಲ್ವರು ಅರೆಸ್ಟ್; ಓರ್ವ ಎಸ್ಕೇಪ್

ದಾವಣಗೆರೆ: ನ್ಯೂಸ್ ಚಾನಲ್ ವರದಿಗಾರರು ಎಂದು ಹೇಳಿಕೊಂಡು ಹಣಕ್ಕೆ ಬೇಡಿಕೆ ಇಟ್ಟು ಸುಲಿಗೆ ಮಾಡುತ್ತಿದ್ದ ನಾಲ್ವರನ್ನು ದಾವಣಗೆರೆ ಜಿಲ್ಲೆ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಘವೇಂದ್ರ ಅಲಿಯಾಸ್ ರಾಘು, ಅಣ್ಣಪ್ಪ, ಸಂತೋಷ್ ಗುಡಿಮನಿ ಹಾಗೂ ಪಕ್ಕಿರೇಶ್ ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿ ಸಾಬ್ ಜಾನ್ ಎಂಬಾತ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆದಿದೆ. ಆರೋಪಿಗಳು ಖಾಸಗಿ ಸುದ್ದಿವಾಹಿನಿ ಪ್ರತಿನಿಧಿಗಳು ಎಂದು ಹೇಳಿಕೊಂಡು ವಸೂಲಿ ಮಾಡುತ್ತಿದ್ದರು.

BREAKING: ಕಾರ್ –ಬೈಕ್ ಮುಖಾಮುಖಿ ಡಿಕ್ಕಿ, ಅಪಘಾತದಲ್ಲಿ ದಂಪತಿ ಸಾವು

ಮಣ್ಣು ತುಂಬುತ್ತಿದ್ದ ರೈತರೊಬ್ಬರನ್ನು ಬೆದರಿಸಿ 50 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ರೈತ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...