ಬೆಂಗಳೂರು: ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ಕೊಡಿಸಿ ಎಂದವರ ವಿರುದ್ಧವೇ ಎಫ್ಐಆರ್ ದಾಖಲಿಸಲಾಗಿರುವ ಘಟನೆ ಬೆಂಗಳೂರಿನ ಬಸವನಗುಡಿಯಲ್ಲಿ ನಡೆದಿದೆ.
ರಾಘವೇಂದ್ರ ಸಹಕಾರ ಬ್ಯಾಂಕ್ ಠೇವಣಿದಾರರ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊ ಆಪರೇಟಿವ್ ಬ್ಯಾಂಕ್ ಮುಂದೆ ನ್ಯಾಯಕ್ಕಾಗಿ ಜ.10ರಂದು ಠೇವಣಿದಾರರು ಪತ್ರ ಚಳುವಳಿ ನಡೆಸಿದ್ದರು.
ಬೆಂಕಿಯ ಕೆನ್ನಾಲಿಗೆಯಿಂದ ಮಗನನ್ನು ರಕ್ಷಿಸಲು ಕಠೋರ ನಿರ್ಧಾರ ಕೈಗೊಂಡ ತಂದೆ…!
ಪತ್ರ ಚಳುವಳಿ ಮೂಲಕ ವಂಚನೆ ಪ್ರಕರಣ ಸಿಬಿಐ ತನಿಖೆಗೆ ಒತ್ತಾಯಿಸಿದ್ದರು. ಪತ್ರ ಚಳುವಳಿ ನಡೆಸಿದ್ದ 7 ಜನರ ವಿರುದ್ಧ ಇದೀಗ ಎನ್ ಡಿಎಂಎ ಆಕ್ಟ್ ಅಡಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎನ್ನಲಾಗಿದೆ.