ಬೆಂಗಳೂರು: ಉಪಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಂತೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ವಾಕ್ಸಮರ ತಾರಕಕ್ಕೇರಿದ್ದು, ರಾಜಕೀಯ ಪಕ್ಷಗಳ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪ, ಏಟಿಗೆ-ಎದುರೇಟು ನೀಡುವ ಮೂಲಕ ಕೆಸರೆರಚಾಟದಲ್ಲಿ ತೊಡಗಿದ್ದಾರೆ.
ಬೆಂಜ್ ಕಾರ್ ನಲ್ಲಿ ಓಡಾಡುವ ಕಾಂಗ್ರೆಸ್ ನಾಯಕರಿಂದ ಅಭಿವೃದ್ಧಿ ಸಾಧ್ಯವೇ ? ಎಂದು ಪ್ರಶ್ನಿಸಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆಗೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ನೀವು ಓಡಾಡಲು ಎತ್ತಿನ ಬಂಡಿ ಇಟ್ಟುಕೊಂಡಿದ್ದೀರಾ ಬಸವರಾಜ ಬೊಮ್ಮಾಯಿಯವರೇ ? ಎಂದು ಪ್ರಶ್ನಿಸಿದ್ದಾರೆ.
‘ಕೈ’ ಅಧ್ಯಕ್ಷರ ಭ್ರಷ್ಟಾಚಾರ ಬಯಲಾಗುತ್ತಿದ್ದಂತೆ ಬಿಜೆಪಿ ತಲೆಗೆ ಕಟ್ಟುವ ಸಿದ್ಧತೆ; ಕೋತಿ ತಾನು ಬೆಣ್ಣೆ ತಿಂದು ಮೇಕೆ ಮೂತಿಗೆ ಹಚ್ಚಿದಂತೆ; ಕಾಂಗ್ರೆಸ್ ಗೆ ಸಿ.ಟಿ. ರವಿ ತಿರುಗೇಟು
ನಿನ್ನೆ ಹಾನಗಲ್ ಉಪಚುನಾವಣಾ ಪ್ರಚಾರಸಭೆಯಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ನಾಯಕರದ್ದು ಎಂತಹ ನಾಟಕ……ಒಮ್ಮೆ ಚಕ್ಕಡಿ ಗಾಡಿಯಲ್ಲಿ ಬರುತ್ತಾರೆ, ಮತ್ತೊಮ್ಮೆ ಸೈಕಲ್ ನಲ್ಲಿ ಬರುತ್ತಾರೆ. ಒಬ್ಬರ ಕೈಯಲ್ಲಿ ಬಾರುಕೋಲು, ಮತ್ತೊಬ್ಬರ ಕೈಯಲ್ಲಿ ಹಗ್ಗ…..ಇವರೆಲ್ಲ ಬೆಂಜ್ ಕಾರ್ ಗಿರಾಕಿಗಳು…..ಚುನಾವಣಾ ಪ್ರಚಾರಕ್ಕೆ ಸಿದ್ದರಾಮಯ್ಯ ಬೆಂಜ್ ಕಾರಿನಲ್ಲಿ ಓಡಾಡುತ್ತಿದ್ದಾರೆ ಎಂದು ಗುಡುಗಿದ್ದರು.
ಜಿಮ್ ನಲ್ಲಿ ವರ್ಕೌಟ್ ಮಾಡಿದ ಸಿದ್ದರಾಮಯ್ಯ; ಚುನಾವಣಾ ಪ್ರಚಾರದ ನಡುವೆಯೇ ವಿಪಕ್ಷ ನಾಯಕನ ದೇಹದಂಡನೆ
ಸಿಎಂ ಹೇಳಿಕೆಗೆ ಇಂದು ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕರು ಬೆಂಜ್ ಕಾರಿನಲ್ಲಿ ಓಡಾಡುತ್ತಾರೆ, ಚಕ್ಕಡಿ ಏರಿ ಪ್ರತಿಭಟನೆ ಮಾಡುತ್ತಾರೆ ಎಂದು ಸಿಎಂ ಗೇಲಿ ಮಾಡಿದ್ದಾರೆ. ಹಾಗಾದರೆ ನೀವು ಓಡಾಡಲು ಮನೆಯಲ್ಲಿ ಎತ್ತಿನ ಬಂಡಿ ಇಟ್ಟುಕೊಂಡಿದ್ದೀರಾ? ಎಂದು ಕೇಳಿದ್ದಾರೆ.