ಕಲಬುರ್ಗಿ: ಕಲಬುರ್ಗಿಯಲ್ಲಿ ಮರುಳು ಮಾಫಿಯಾಗೆ ಹೆಡ್ ಕಾನ್ಸ್ ಸ್ಟೇಬಲ್ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ವಿರುದ್ಧ ಕಿಡಿ ಕಾರಿರುವ ಸಚಿವ ಪ್ರಿಯಾಂಕ್ ಖರ್ಗೆ, ಬೇರೆ ರಾಜ್ಯದವರು ಬಂದು ಇಲ್ಲಿ ದಾಳಿ ನಡೆಸುತ್ತಿದ್ದಾರೆ. ನಿಮಗೆ ಮಾಹಿತಿ ಇಲ್ಲದೇ ಇದೆಲ್ಲ ಹೇಗೆ ನಡೆಯಲು ಸಾಧ್ಯ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲೆಯಲ್ಲಿ ನಿಮಗೆ ಗೊತ್ತಿಲ್ಲದೇ ಹೇಗೆ ಮರಳು ದಂಧೆ ನಡೆಯುತ್ತಿದೆ. ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ನಡೆದು ಅನಾಹುತ ನಡೆದಿದ್ದರು ಕಣ್ಮುಚ್ಚಿ ಕುಳಿತಿದ್ದೀರಾ ? ಹೊರ ರಾಜ್ಯದವರು ಇಲ್ಲಿಗೆ ಬಂದು ದಾಳಿ ನಡೆಸುತ್ತಿದ್ದಾರೆ. ಇಲ್ಲಿ ದಾಳಿ ನಡೆಸಲು ನಿಮಗೆ ಯೋಗ್ಯತೆ ಇಲ್ಲವಾ ? ಎಂದು ಗುಡುಗಿದ್ದಾರೆ.
ಜಿಲ್ಲೆಯಲ್ಲಿ ಎಲ್ಲೆಲ್ಲಿ ಈ ದಂಧೆ ನಡೆಯುತ್ತಿದೆ ? ಹೇಗೆ ನಡೆಯುತ್ತಿದೆ ಎಂಬುದು ಅಧಿಕಾರಿಗಳಿಗೆ ಗೊತ್ತಿಲ್ಲವೇ ? ಮರಳು ದಂಧೆ ಬಂದ್ ಮಾಡದಿದ್ದರೆ ನಿಮ್ಮ ಸರ್ವಿಸ್ ಬಂದ್ ಆಗುತ್ತೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.