alex Certify BIG NEWS: ನಾಳೆ ಸಿಎಂ ಬಸವರಾಜ್ ಬೊಮ್ಮಾಯಿಗೆ ಡಬಲ್ ಸಂಭ್ರಮ; ಆದರೂ ಹುಟ್ಟುಹಬ್ಬ ಆಚರಿಸಲ್ಲ ಎಂದು ಹೇಳಿದ್ದೇಕೆ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಾಳೆ ಸಿಎಂ ಬಸವರಾಜ್ ಬೊಮ್ಮಾಯಿಗೆ ಡಬಲ್ ಸಂಭ್ರಮ; ಆದರೂ ಹುಟ್ಟುಹಬ್ಬ ಆಚರಿಸಲ್ಲ ಎಂದು ಹೇಳಿದ್ದೇಕೆ?

ಬೆಂಗಳೂರು: ನಾಳೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಡಬಲ್ ಸಂಭ್ರಮ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ನಾಳೆಗೆ 6 ತಿಂಗಳು. ಸಿಎಂ ಆಗಿ 6 ತಿಂಗಳು ತುಂಬಿದ ದಿನವೇ ಹುಟ್ಟುಹಬ್ಬದ ಸಂಭ್ರಮ.

ಹೌದು. ನಾಳೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು 6 ತಿಂಗಳು ಕಳೆಯಲಿವೆ. ಇದೇ ವೇಳೆ ನಾಳೆ ಸಿಎಂ ಬೊಮ್ಮಾಯಿ ಅವರ ಜನ್ಮದಿನವಾಗಿದ್ದು, 62ನೇ ವಸಂತಕ್ಕೆ ಕಾಲಿಡಲಿದ್ದಾರೆ. ಡಬಲ್ ಸಂಭ್ರಮದ ಸಂದರ್ಭವಿದ್ದರೂ ಸಿಎಂ ನಾಳೆ ನನ್ನ ಹುಟ್ಟುಹಬ್ಬ ಆಚರಿಸುವುದಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ನಾಳೆ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ. ನಾಳೆ ನಾನು ಸಿಎಂ ಆಗಿ 6 ತಿಂಗಳು ಪೂರ್ಣ ಹಿನ್ನೆಲೆಯಲ್ಲಿ 6 ತಿಂಗಳ ಆಡಳಿತದ ಪಕ್ಷಿನೋಟ ಪುಸ್ತಕ ಬಿಡುಗಡೆ ಮಾಡಲಾಗುವುದು. ಆದರೆ ನಾಳೆ ಯಾವುದೇ ಹೊಸ ಘೋಷಣೆಗಳನ್ನು ಮಾಡಲ್ಲ. ಆರು ತಿಂಗಳಿಗೆಲ್ಲ ಯಾರೂ ಹೊಸ ಘೋಷಣೆಗಳನ್ನು ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...