ಬೆಂಗಳೂರು: ಹಿರಿಯರು ಗೌರವ ಕೊಟ್ಟು, ಗೌರವ ತೆಗೆದುಕೊಳ್ಳಲಿ. ಒಂದು ಬಾರಿ ಗೆದ್ದರೂ 6-7 ಬಾರಿ ಗೆದ್ದರೂ ವೋಟು ಒಂದೇ. ಆರೇಳು ಸಲ ಗೆದ್ದ ಮಾತ್ರಕ್ಕೆ ವೋಟು ಬೇರೆ ಇರುವುದಿಲ್ಲ ಎಂದು ಹೇಳುವ ಮೂಲಕ ಶಾಸಕ ಪ್ರೀತಂ ಗೌಡ ಸಚಿವ ವಿ. ಸೋಮಣ್ಣಗೆ ತಿರುಗೇಟು ನೀಡಿದ್ದಾರೆ.
ವಿಧಾನಸೌಧದ ಬಳಿ ಮಾತನಾಡಿದ ಶಾಸಕ ಪ್ರೀತಂ ಗೌಡ, ನಾನು ರಾಜಕಾರಣ ಮಾಡುವುದಕ್ಕೆ ಬಂದಿದ್ದೇನೆ ಹೊರತು ಕಬ್ಬನ್ ಪಾಕ್, ಲಾಲ್ ಬಾಗ್ ನೋಡಲೆಂದು ಬೆಂಗಳೂರಿಗೆ ಬಂದಿಲ್ಲ. ಹಿರಿಯರಾದವರು ಸಲಹೆ ಕೊಟ್ಟು, ಮಾರ್ಗದರ್ಶನಗಳನ್ನು ನೀಡಲಿ ಅದನ್ನು ಬಿಟ್ಟು ಬಾಯಿಗೆ ಬಂದಂತೆ ನನ್ನ ಬಗ್ಗೆ ಮಾತನಾಡುವುದು ಸರಿಯಲ್ಲ. ಇದು ಪ್ರಜಾಪ್ರಭುತ್ವ, ನಮ್ಮದು ರಾಷ್ಟ್ರೀಯ ಪಕ್ಷ ಹೊರತು ಹಿಟ್ಲರ್ ಪಕ್ಷವಲ್ಲ ಎಂದು ಕಿಡಿಕಾರಿದ್ದಾರೆ.
ಹಲಸಿನ ಹಣ್ಣು ತಲೆ ಮೇಲೆ ಬಿದ್ದು ಆಸ್ಪತ್ರೆ ಸೇರಿದ ಆಟೋ ಚಾಲಕ
ಪ್ರೀತಂ ಗೌಡ ಒಂದು ಬಾರಿ ಶಾಸಕನಾದ ಮಾತ್ರಕ್ಕೆ ದೇವರಲ್ಲ, ತಮ್ಮ ಇತಿಮಿತಿಯಲ್ಲಿ ಇರಬೇಕು ಎಂದು ಹೇಳುವ ಮೂಲಕ ಸಚಿವ ವಿ. ಸೋಮಣ್ಣ ಶಾಸಕ ಪ್ರೀತಂ ಗೌಡಗೆ ಟಾಂಗ್ ನೀಡಿದ್ದರು. ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಶಾಸಕ ಪ್ರೀತಂ ಗೌಡ, ವಿ. ಸೋಮಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಒಟ್ಟಾರೆ ಸಂಪುಟ ರಚನೆ ಬೆನ್ನಲ್ಲೇ ಬಿಜೆಪಿಯಲ್ಲಿ ಹಿರಿಯರು ಹಾಗೂ ಕಿರಿಯರ ನಡುವೆ ಅಸಮಾಧಾನ ಸ್ಫೋಟಗೊಂಡಿದ್ದು, ಇನ್ನಷ್ಟು ತಾರಕಕ್ಕೇರುವ ಸಾಧ್ಯತೆ ಇದೆ.