ಬೆಂಗಳೂರು: ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಎಂಬ ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿ ಮುಂದುವರೆಸಿದ್ದು, ಕಟೀಲ್ ಒಬ್ಬ ಅಪ್ರಬುದ್ಧ ರಾಜಕಾರಣಿ ಎಂದು ಗುಡುಗಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕಟೀಲ್ ಒಬ್ಬ ಜೋಕರ್, ಅವರ ತಲೆ ಕೆಟ್ಟಿದೆ. ಓರ್ವ ಅಪ್ರಬುದ್ಧ ರಾಜಕಾರಣಿಯಾಗಿದ್ದಾರೆ. ಇಂತವರನ್ನು ಬಿಜೆಪಿ ನಾಯಕರು ರಾಜ್ಯಾಧ್ಯಕ್ಷರ ಪಟ್ಟದಿಂದ ಮೊದಲು ವಜಾಗೊಳಿಸಬೇಕು ಎಂದರು.
ಸುಖ ನಿದ್ರೆಗಾಗಿ ಮಗುವಿನ ಪ್ರಾಣ ಪಣಕ್ಕಿಟ್ಟ ತಾಯಿ..!
ಇದೇ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ರನ್ನು ಜೈಲಿಗೆ ಕಳುಹಿಸಬೇಕು ಎಂಬ ಹೇಳಿಕೆ ನೀಡಿದ್ದ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ, ಸುಧಾಕರ್ ಗೆ ಅಧಿಕಾರದ ಮದ. ಹಾಗಾಗಿ ದುರಹಂಕಾರದಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅಧಿಕಾರವನ್ನು ಶಾಶ್ವತ ಎಂದು ಸುಧಾಕರ್ ಭಾವಿಸಿದ್ದಾರೆ. 2023ರಲ್ಲಿ ಮನೆಗೆ ಹೋಗುತ್ತಾರಲ್ಲ ಆಗ ಯಾರು ಜೈಲಿಗೆ ಹೋಗುತ್ತಾರೆ ಎಂಬುದು ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದರು.
ಚಾಮುಂಡಿ ಬೆಟ್ಟದ ನಂದಿಬೆಟ್ಟ ಮಾರ್ಗದಲ್ಲಿ ಭೂಕುಸಿತ: ಮೈಸೂರು, ಮಂಡ್ಯದಲ್ಲಿ ಅವಾಂತರ ಸೃಷ್ಠಿಸಿದ ಮಳೆ, ಜನಜೀವನ ಅಸ್ತವ್ಯಸ್ತ
ಆರ್.ಎಸ್.ಎಸ್. ಕಂಡರೆ ನನಗೆ ಯಾವುದೇ ಭಯವೂ ಇಲ್ಲ, ಆದರೆ ಇವರು ಸಮಾಜವನ್ನು ಒಡೆದು ಹಾಕುತ್ತಿದ್ದಾರೆ ಎಂಬ ಆತಂಕ. ಯಾರ ಓಲೈಕೆಗಾಗಿ ನಾನು ಆರ್ ಎಸ್ ಎಸ್ ನ್ನು ಬೈಯ್ಯುತ್ತಿಲ್ಲ. ಅವರು ಮಾಡುವ ಕೆಲಸಗಳಿಗೆ ನಾನು ಅವರನ್ನು ಬೈಯ್ಯುತ್ತಿದ್ದೇನೆ. ವಿಜಯಪುರದಲ್ಲಿ ಪೊಲೀಸರಿಗೆ ಕೇಸರಿ ಶಾಲು ಹಾಕಿಸಿದ್ದಾರೆ. ಯಾಕೆ ಪೊಲೀಸರಿಗೆ ಸಮವಸ್ತ್ರ ಕೊಟ್ಟಿಲ್ಲವೇ? ಪೊಲೀಸ್ ಇಲಾಖೆ ಸೇರಿದಂತೆ ಇಡೀ ರಾಜ್ಯವನ್ನೇ ಕೇಸರಿಕರಣ ಮಾಡಲು ಬಿಜೆಪಿ ನಾಯಕರು ಹೊರಟಿದ್ದಾರೆ. ರಾಜ್ಯದಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ, ರಾಜ್ಯಕ್ಕೆ ಬರಬೇಕಿದ್ದ ಜಿ ಎಸ್ ಟಿ ಪರಿಹಾರ ಪಾಲು ಕೇಳಲು, ಅನುದಾನವನ್ನು ಕೇಳಲು ಬಿಜೆಪಿ ನಾಯಕರಿಗೆ ಧಮ್ ಇಲ್ಲ. ಪ್ರಧಾನಿ ಮೋದಿ ಬಳಿ ಮಾತನಾಡಲು ಒಬ್ಬರಿಗೂ ಧೈರ್ಯವಿಲ್ಲ. ಆದರೆ ಸಮಾಜ ಒಡೆಯುವ ಕೆಲಸವನ್ನು ಮಾತ್ರ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.