ನವದೆಹಲಿ: ತಮ್ಮ ಟ್ವಿಟರ್ ಖಾತೆ ಲಾಕ್ ಮಾಡಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಗುಡುಗಿದ್ದಾರೆ.
ರಾಜಕಾರಣಿಯಾಗಿ ಇದನ್ನು ಸಹಿಸಲಾಗದು. ಕಂಪನಿಗಳಿಂದ ನಮ್ಮ ರಾಜಕೀಯ ನಿರ್ಧರಿಸುವ ಪ್ರಯತ್ನ ನಡೆಯುತ್ತಿದೆ. ನಮಗೆ ಸಂಸತ್ ನಲ್ಲಿ ಮಾತನಾಡಲು ಅವಕಾಶ ಕೊಟ್ಟಿಲ್ಲ. ಭರವಸೆ ಬೆಳಕಾಗಿ ಟ್ವಿಟರ್ ಇದೆ ಎಂದು ಭಾವಿಸಿದರೆ ಈಗ ಅದನ್ನು ಬಂದ್ ಮಾಡಲಾಗಿದೆ. ಇದು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕಾರಣಕ್ಕೆ ಪೊಲೀಸ್ ಠಾಣೆಯಲ್ಲೇ ಠಿಕಾಣಿ ಹೂಡಿದ್ದಾರೆ ಬಾಂಗ್ಲಾ ದಂಪತಿ
ಟ್ವಿಟರ್ ಇಂದು ನಿಸ್ಪಕ್ಷಪಾತ ವೇದಿಕೆಯಾಗಿ ಉಳಿದಿಲ್ಲ, ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ. ನಮ್ಮ ರಾಜಕೀಯವನ್ನು ಬ್ಯುಸಿನೆಸ್ ನಡೆಸುವ ಉದ್ಯಮಿಗಳು ನಿರ್ಧರಿಸುತ್ತಿದ್ದಾರೆ ಎಂದರೆ ಒಪ್ಪಲಾಗದು ಎಂದು ಕಿಡಿಕಾರಿದ್ದಾರೆ.