alex Certify BIG NEWS: ನಟ ಚಂದನ್ ಒಡೆತನದ ಬಿರಿಯಾನಿ ಹೋಟೆಲ್ ನಲ್ಲಿ ಕಳ್ಳತನ; ಕಳ್ಳರ ಕರಾಮತ್ತು ಕ್ಯಾಮರಾದಲ್ಲಿ ಸೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಟ ಚಂದನ್ ಒಡೆತನದ ಬಿರಿಯಾನಿ ಹೋಟೆಲ್ ನಲ್ಲಿ ಕಳ್ಳತನ; ಕಳ್ಳರ ಕರಾಮತ್ತು ಕ್ಯಾಮರಾದಲ್ಲಿ ಸೆರೆ

ಬೆಂಗಳೂರು: ನಟ ಚಂದನ್ ಕುಮಾರ್ ಅವರ ಬಿರಿಯಾನಿ ಹೋಟೆಲ್ ನಲ್ಲಿ ಕಳ್ಳತನವಾಗಿದ್ದು, 50 ಸಾವಿರ ರೂಪಾಯಿ ನಗದು ದೋಚಿ ಕಳ್ಳರು ಪರಾರಿಯಾಗಿದ್ದಾರೆ.

ಬೆಂಗಳೂರಿನ ಸಹಕಾರ ನಗರದಲ್ಲಿರುವ ಬಿರಿಯಾನಿ ಹೋಟೆಲ್ ನಲ್ಲಿ ನಿನ್ನೆ ರಾತ್ರಿ ಕಳ್ಳತನವಾಗಿದ್ದು, ನಟ ಚಂದನ್ ಅವರ ದೊನ್ನೆ ಬಿರಿಯಾನಿ ಹೋಟೇಲ್ ಸೇರಿ ನಾಲ್ಕೈದು ಅಂಗಡಿಗಳಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ.

ಖದೀಮರ ಕಳ್ಳತನದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಹೋಟೆಲ್ ನಿಂದ 50 ಸಾವಿರ ರೂಪಾಯಿ ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಈ ಬಗ್ಗೆ ನಟ ಚಂದನ್ ಕೋಡಿಗೆ ಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...