alex Certify BIG NEWS: ದೋಷ ನಿವಾರಣೆ ಮಾಡುವುದಾಗಿ ಹೇಳಿ ಯುವತಿ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ; ಗುರೂಜಿ ಆನಂದಮೂರ್ತಿ ವಿರುದ್ಧ ಅತ್ಯಾಚಾರ ಆರೋಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದೋಷ ನಿವಾರಣೆ ಮಾಡುವುದಾಗಿ ಹೇಳಿ ಯುವತಿ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ; ಗುರೂಜಿ ಆನಂದಮೂರ್ತಿ ವಿರುದ್ಧ ಅತ್ಯಾಚಾರ ಆರೋಪ

ಬೆಂಗಳೂರು: ಯುವತಿಗೆ ಇರುವ ದೋಷ ನಿವಾರಣೆ ಮಾಡುವುದಾಗಿ ಹೇಳಿ ಕಪಟ ಸ್ವಾಮಿಯೊಬ್ಬ ಸತತ 7 ವರ್ಷಗಳಿಂದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು, ಪತಿಯ ಕಾಮದಾಟಕ್ಕೆ ಪತ್ನಿಯೂ ಸಾಥ್ ನೀಡಿರುವ ಅಮಾನುಷ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಯುವತಿಯ ರಾಶಿ, ನಕ್ಷತ್ರಕ್ಕೆ ದೋಷವಿದೆ. ದೋಷ ನಿವಾರಣೆಗಾಗಿ ಪೂಜೆ ಮಾಡುವುದಾಗಿ ಹೇಳಿ ಮನೆಗೆ ಕರೆಸಿಕೊಂಡು ಆನಂದ ಮೂರ್ತಿ ಎಂಬ ಸ್ವಾಮಿ ತೀರ್ಥ, ಪ್ರಸಾದದ ಹೆಸರಲ್ಲಿ ಮತ್ತು ಬರಿಸುವ ದ್ರವ ಮಿಶ್ರಣ ಮಾಡಿ ಯುವತಿಗೆ ನಿರಂತರ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಅಲ್ಲದೇ ಬರಬರುತ್ತಾ ತಾನು ಶ್ರೀಕೃಷ್ಣ, ನೀನು ರಾಧೆ, ಇವಳು ರುಕ್ಮಿಣಿ ಎಂದು ಪತ್ನಿಗೂ ಪರಿಚಯಿಸಿದ್ದು, ಪತಿಯ ಕಾಮದಾಟಕ್ಕೆ ಹೆಂಡತಿಯೂ ಬೆಂಬಲ ನೀಡಿದ್ದಾಳೆ.

ಬೆಂಗಳೂರಿನ ಆವಲಹಳ್ಳಿ ಬಳಿ ಮನೆಯನ್ನೇ ಆಶ್ರಮದ ರೀತಿ ಬಿಂಬಿಸಿಕೊಂಡಿರುವ ಆನಂದ ಮೂರ್ತಿ ವಿರುದ್ಧ ಇದೀಗ ಅತ್ಯಾಚಾರ, ವಂಚನೆ ಆರೋಪ ಕೇಳಿಬಂದಿದೆ. 7 ವರ್ಷಗಳ ಹಿಂದೆ ಸಂತ್ರಸ್ತ ಯುವತಿಗೆ ಆನಂದ ಮೂರ್ತಿಯನ್ನು ಯುವತಿಯ ಸ್ನೇಹಿತೆ ಹಾಗೂ ಆಕೆಯ ತಾಯಿ ಪರಿಚಯಿಸಿದ್ದರು. ಯುವತಿಯ ಕುಟುಂಬಕ್ಕೆ ದೋಷವಿದೆ, ಪೂಜೆ ಮಾಡಬೇಕು ಎಂದು ಆಶ್ರಮಕ್ಕೆ ಕರೆಸಿಕೊಳ್ಳುತ್ತಿದ್ದ ಸ್ವಾಮಿಜಿ ಯುವತಿಗೆ ಮತ್ತು ಬರುವ ಔಷಧ ನೀಡಿ ಅತ್ಯಾಚಾರವೆಸಗಿದ್ದಾನೆ.

ಅಲ್ಲದೇ ಖಾಸಗಿ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡು ನಿನ್ನ ಜಾತಕದ ಪ್ರಕಾರ ನೀನು ನನ್ನ ಜತೆ ಇರಬೇಕು, ನಾನು ಕಾಳಿ ಆರಾಧಕ ನನ್ನನ್ನು ನಂಬು ನಿನ್ನ ಎಲ್ಲಾ ಕಷ್ಟ ಪರಿಹಾರ ಮಾಡುತ್ತೇನೆ ಎಂದು ಹೇಳುತ್ತಿದ್ದ. ವಿಷಯ ಮನೆಯವರಿಗೆ ಹೇಳಿದರೆ ಮನೆಯವರೆಲ್ಲರನ್ನು ಮುಗಿಸುವುದಾಗಿ ಯುವತಿಗೆ ಬೆದರಿಸಿದ್ದ. ಕುಟುಂಬದವರನ್ನು ಕಳೆದುಕೊಳ್ಳುವ ಭೀತಿಯಲ್ಲಿ ಯುವತಿ ಕಪಟ ಸ್ವಾಮಿಜಿ ಕೊಡುತ್ತಿದ್ದ ಕಿರುಕುಳ ಸಹಿಸಿಕೊಂಡಿದ್ದಳು. ಇತ್ತೀಚೆಗೆ ಯುವತಿಗೆ ಮನೆಯವರು ಮದುವೆ ನಿಶ್ಚಯ ಮಾಡಿದ್ದರು. ಯುವತಿ ಕುಟುಂಬದವರ ಮುಂದೆ ಮದುವೆಯಾಗಿ ಚೆನ್ನಾಗಿ ಇರು ಎಂದು ಹಾರೈಸುವಂತೆ ನಾಟಕವಾಡಿದ್ದ ಆನಂದಮೂರ್ತಿ, ವರನಿಗೆ ಯುವತಿಯ ಖಾಸಗಿ ಫೋಟೋ, ವಿಡಿಯೋ ಕಳುಹಿಸಿದ್ದ.

ವಿಷಯ ತಿಳಿದು ಕಂಗಾಲಾದ ಯುವತಿ ಪೋಷಕರು ಇದೀಗ ಕೆ.ಆರ್.ಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಆರೋಪಿ ಆನಂದಮೂರ್ತಿ ನಾಪತ್ತೆಯಾಗಿದ್ದು, ಕಳ್ಳ ಸ್ವಾಮಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...