alex Certify BIG NEWS: ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 100 ರೂ. ಗಡಿ ದಾಟಿದ ಡೀಸೆಲ್ ದರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 100 ರೂ. ಗಡಿ ದಾಟಿದ ಡೀಸೆಲ್ ದರ…!

ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪ್ರತಿ ಲೀಟರ್​ ಡೀಸೆಲ್​ ದರ 100 ರೂಪಾಯಿ ಗಡಿ ದಾಟಿದೆ. ರಾಜಸ್ಥಾನದ ಗಂಗಾನಗರದಲ್ಲಿ ಪ್ರತಿ ಲೀಟರ್​ ಡೀಸೆಲ್​ ದರವು 100.5 ರೂಪಾಯಿ ಆಗಿದೆ.

ಶನಿವಾರ ಪ್ರತಿ ಲೀಟರ್​​ ಪೆಟ್ರೋಲ್​ಗೆ 27 ಪೈಸೆ ಏರಿಕೆಯಾಗಿದ್ದರೆ ಪ್ರತಿ ಲೀಟರ್​ ಡೀಸೆಲ್​ ದರ 23 ಪೈಸೆ ಏರಿಕೆ ಕಂಡಿದೆ.

ಮೇ 4ರ ಬಳಿಕ ಪ್ರತಿ ಲೀಟರ್​ ಪೆಟ್ರೋಲ್​ ಬೆಲೆ 5.75 ರೂಪಾಯಿ ಏರಿಕೆ ಕಂಡಿದ್ದರೆ ಡೀಸೆಲ್​ ದರ ಪ್ರತಿ ಲೀಟರ್​ಗೆ 6.25 ರೂಪಾಯಿ ಏರಿಕೆಯಾದಂತಾಗಿದೆ.

ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್ ದರ 96.12 ರೂಪಾಯಿ ಆಗಿದ್ದು ಡೀಸೆಲ್​ ಪ್ರತಿ ಲೀಟರ್​​ಗೆ 86.98 ರೂಪಾಯಿಗೆ ಮಾರಾಟವಾಗ್ತಿದೆ. ದೆಹಲಿಯಲ್ಲಿ ನಿಗದಿಯಾಗುವ ಪೆಟ್ರೋಲ್​ ಹಾಗೂ ಡೀಸೆಲ್​ ದರ ಇಡೀ ದೇಶಕ್ಕೆ ಮಾನದಂಡವಾಗಿದ್ದರೂ ಸಹ ಚಿಲ್ಲರೆ ದರದಲ್ಲಿ ಏರಿಳಿತವಾಗಬಹುದು.

ಬೆಂಗಳೂರಿನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ಬೆಲೆ ನೂರು ರೂಪಾಯಿಗಳ ಗಡಿ ಮುಟ್ಟುತ್ತಿದ್ದು 99.33 ರೂಪಾಯಿ ಆಗಿದೆ. ಮುಂಬೈ ಬಳಿಕ ಇಡೀ ದೇಶದಲ್ಲೇ ಅತೀ ಹೆಚ್ಚು ಪೆಟ್ರೋಲ್​ ದರ ಹೊಂದಿರುವ ನಗರ ಬೆಂಗಳೂರಾಗಿದೆ. ಮುಂಬೈನಲ್ಲಿ ಪ್ರತಿ ಲೀಟರ್​ಗೆ ಪೆಟ್ರೋಲ್​ಗೆ 102.3 ರೂಪಾಯಿ ಹಾಗೂ ಡೀಸೆಲ್​ ದರ 94.39 ರೂಪಾಯಿ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...